ಗುರುವಾರ , ಜನವರಿ 23, 2020
28 °C

ಡಿಸೆಂಬರ್ ತಿಂಗಳಲ್ಲಿ ಬಿಕಾನೇರ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು 162 ಶಿಶುಗಳು

ಎಎನ್ಐ Updated:

ಅಕ್ಷರ ಗಾತ್ರ : | |

Dr. HS Kumar

ಬಿಕಾನೇರ್: ರಾಜಸ್ಥಾನದ ಬಿಕಾನೇರ್‌ನಲ್ಲಿ ಕಳೆದ ಡಿಸೆಂಬರ್ ತಿಂಗಳಲ್ಲಿ 162 ಶಿಶುಗಳು ಮೃತಪಟ್ಟಿವೆ.
 ಡಿಸೆಂಬರ್ ತಿಂಗಳಲ್ಲಿ ರಾಜಸ್ಥಾನದ ವಿವಿಧ ಆಸ್ಪತ್ರೆಗಳಲ್ಲಿ 2,219  ಶಿಶುಗಳು ಚಿಕಿತ್ಸೆಗಾಗಿ ದಾಖಲಾಗಿದ್ದವು. ಅದರಲ್ಲಿ 162 ಶಿಶುಗಳು ಐಸಿಯುನಲ್ಲಿಯೇ ಮೃತಪಟ್ಟಿವೆ. ಈ ಶಿಶುಗಳು  ಆಸ್ಪತ್ರೆಯಲ್ಲಿ ಹುಟ್ಟಿದ್ದು ಅಲ್ಲ ಎಂದು ಸರ್ದಾರ್ ಪಟೇಲ್ ಮೆಡಿಕಲ್ ಕಾಲೇಜ್, ಪಿಬಿಎಂ ಆಸ್ಪತ್ರೆಯ  ಪ್ರಾಂಶುಪಾಲ  ಡಾ.ಎಚ್.ಎಸ್ ಕುಮಾರ್ ಹೇಳಿದ್ದಾರೆ.

ಪ್ರತಿಯೊಂದು ಮಗುವನ್ನು ರಕ್ಷಿಸಲು ನಾವು ಪ್ರಯತ್ನಿಸಿದ್ದೆವು ಎಂದು ಹೇಳಿದ ಅವರು ಆಸ್ಪತ್ರೆಯವರ ಅಜಾಗ್ರತೆಯಿಂದ ಶಿಶು ಮರಣ ಸಂಭವಿಸಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ : ಕಳೆದ 3 ತಿಂಗಳಲ್ಲಿ ರಾಜ್‌ಕೋಟ್ ಸರ್ಕಾರಿ ಆಸ್ಪತ್ರೆಯಲ್ಲಿ 269 ಶಿಶು ಮರಣ

ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಕಮ್ಯೂನಿಟಿ ಹೆಲ್ತ್ ಸೆಂಟರ್‌ನಲ್ಲಿ ಹುಟ್ಟಿದ ಮಕ್ಕಳ ಆರೋಗ್ಯ ಚಿಂತಾಜನಕ ರೀತಿಯಲ್ಲಿದ್ದಾಗ ಪಿಬಿಎಂ ಆಸ್ಪತ್ರೆಗೆ ದಾಖಲಿಸಲಾಗಿತ್ತು.  ಆ ಶಿಶುಗಳ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದ್ದು,  ಚಿಕಿತ್ಸೆ ವೇಳೆ ಮೃತ ಪಟ್ಟಿವೆ ಎಂದು ಕುಮಾರ್ ಹೇಳಿದ್ದಾರೆ.

ಇದನ್ನೂ ಓದಿ: ರಾಜಸ್ಥಾನ: ಒಂದು ತಿಂಗಳಲ್ಲೇ 100 ಶಿಶುಗಳ ಸಾವು

ಕೋಟಾದಲ್ಲಿರುವ ಜೆಕೆ ಲಾನ್ ಸರ್ಕಾರಿ ಆಸ್ಪತ್ರೆಯಲ್ಲಿ ಡಿಸೆಂಬರ್ ತಿಂಗಳಲ್ಲಿ ಕನಿಷ್ಠ 110 ಶಿಶುಗಳು ಸಾವಿಗೀಡಾಗಿದ್ದವು.

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು