ಭಾನುವಾರ, ಡಿಸೆಂಬರ್ 8, 2019
19 °C

ಛತ್ತೀಸಗಡ: ರಮಣ್‌ಸಿಂಗ್‌ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ

ಏಜೆನ್ಸಿಸ್ Updated:

ಅಕ್ಷರ ಗಾತ್ರ : | |

ರಾಯಪುರ(ಛತ್ತಿಸಗಡ):  ಛತ್ತೀಸಗಡ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲು ಅನುಭವಿಸಿದ ಕಾರಣ ರಮಣ್‌ಸಿಂಗ್ ಮುಖ್ಯಮಂತ್ರಿ ಸ್ಥಾನಕ್ಕೆ ಮಂಗಳವಾರ ರಾಜೀನಾಮೆ ನೀಡಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ’ಬಹಳ ವರ್ಷಗಳ ನಂತರ ಬಿಜೆಪಿ ಇಲ್ಲಿ ಸೋತಿದೆ. ಇದಕ್ಕೆ ಸಾಕಷ್ಟು ಕಾರಣಗಳಿವೆ. ಅದನ್ನೆಲ್ಲ ಈಗ ಹೇಳಲು ಸಾಧ್ಯವಿಲ್ಲ. ಫಲಿತಾಂಶದ ಬಗ್ಗೆ ಪಕ್ಷದ ಸಭೆಯಲ್ಲಿ ಚರ್ಚಿಸಿ, ಎಲ್ಲಿ ಎಡವಿದ್ದೇವೆ ಎನ್ನುವುದನ್ನು ಪರಾಮರ್ಶಿಸುತ್ತೇವೆ‘ ಎಂದು ಹೇಳಿದರು.

’ರಾಜ್ಯಪಾಲರನ್ನು ಭೇಟಿಯಾಗಿ ನನ್ನ ರಾಜೀನಾಮೆ ಪತ್ರವನ್ನು ನೀಡಿದ್ದೇನೆ. ಬಿಜೆಪಿ ಸೋಲಿಗೆ ನೈತಿಕ ಹೊಣೆಹೊತ್ತು ನಾನು ರಾಜೀನಾಮೆ ನೀಡಿದ್ದೇನೆ. ಪಕ್ಷ ಗೆಲುವು ಸಾಧಿಸಿದಾಗಲೆಲ್ಲ ಅದರ ಎಲ್ಲಾ ಹೆಸರನ್ನು ನನಗೆ ನೀಡಲಾಗಿತ್ತು. ಹಾಗೆಯೇ ಸೋತಾಗ ಅದಕ್ಕೆ ನಾನೇ ಜವಾಬ್ದಾರನಾಗುತ್ತೇನೆ. ಈಗಿನ ಈ ಫಲಿತಾಂಶ ಮುಂದಿನ ಲೋಕಸಭಾ ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ‘ ಎಂದು ಪ್ರತಿಕ್ರಿಯಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು