ಭಾನುವಾರ, ಜೂಲೈ 12, 2020
23 °C

ವರದಕ್ಷಿಣೆ ಬೇಡ ಎಂದ ವರನಿಗೆ 1000 ಪುಸ್ತಕ ಉಡುಗೊರೆಯಾಗಿ ಕೊಟ್ಟ ಮಾವ! 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲ್ಕತ್ತ: ವರದಕ್ಷಿಣೆ ಬೇಡ ಎಂದ ವರನಿಗೆ ವಧುವಿನ ಅಪ್ಪ 1000 ಪುಸ್ತಕಗಳನ್ನು ಉಡುಗೊರೆಯಾಗಿ ಕೊಟ್ಟು ಸುದ್ದಿಯಾಗಿದ್ದಾರೆ.
ಪಶ್ಚಿಮ ಬಂಗಾಳದಲ್ಲಿನ ಸೂರ್ಯಕಾಂತ ಬರೀಕ್ ಮತ್ತು ಪ್ರಿಯಾಂಕ್ ಬೇಜ್ ಅವರ ಮದುವೆಯಲ್ಲಿ ಪ್ರಿಯಾಂಕಾ ಅವರ ಅಪ್ಪ ಈ ರೀತಿಯ ಉಡುಗೊರೆ ನೀಡಿದ್ದಾರೆ.

ಶಾಲಾ ಶಿಕ್ಷಕರಾಗಿರುವ ಸೂರ್ಯಕಾಂತ ವರದಕ್ಷಿಣೆ ಬೇಡ ಎಂದು ಹೇಳಿದ್ದರು. ಆದರೆ ಅಳಿಯನಿಗೆ ಉಡುಗೊರೆ ರೂಪದಲ್ಲಿ ಏನಾದರೂ ನೀಡಬೇಕು ಎಂದು ಯೋಚಿಸಿದ್ದರು ಪ್ರಿಯಾಂಕಾ ಅವರ ಅಪ್ಪ. ಹಾಗಾಗಿ ₹1 ಲಕ್ಷ ಮೌಲ್ಯದ 1000 ಪುಸ್ತಕಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.

ನಾನು ಯಾವುದೇ ಕಾರಣಕ್ಕೂ ವರದಕ್ಷಿಣೆ ಸ್ವೀಕರಿಸುವುದಿಲ್ಲ ಎಂದು ಹೇಳಿದ್ದೆ. ನಾನು ಮದುವೆ ಮಂಟಪಕ್ಕೆ ಬಂದಾಗ ಪುಸ್ತಕಗಳ ಉಡುಗೊರೆ ಅಲ್ಲಿತ್ತು ಎಂದು ಮದುಮಗ ಹೇಳಿರುವುದಾಗಿ ದಿ ಟೆಲಿಗ್ರಾಫ್ ವರದಿ ಮಾಡಿದೆ.

ಪ್ರಿಯಾಂಕಾ ಮತ್ತು  ಸೂರ್ಯಕಾಂತ ಇಬ್ಬರೂ ಪುಸ್ತಕ ಪ್ರೇಮಿಗಳಾಗಿದ್ದಾರೆ, ವರದಕ್ಷಿಣೆ ವಿರೋಧಿಯಾಗಿರುವ ಗಂಡನನ್ನು ಪಡೆದುದೇ ಖುಷಿ ಅಂದಿದ್ದಾರೆ ಪ್ರಿಯಾಂಕಾ.  ಕೊಲ್ಕತ್ತಾದ ಕಾಲೇಜು ರಸ್ತೆ ಮತ್ತು ಉದ್ಬೋದನ್ ಕಾರ್ಯಾಲಯದಿಂದ ಈ ಪುಸ್ತಕಗಳನ್ನು ಖರೀದಿಸಲಾಗಿತ್ತು 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು