ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಹರಡುವಿಕೆ ತಪ್ಪಿಸಲು ಸೈಕಲ್‌ ಬಳಕೆ ಉತ್ತೇಜಿಸುವಂತೆ ಕೇಂದ್ರ ಸೂಚನೆ

Last Updated 13 ಜೂನ್ 2020, 9:56 IST
ಅಕ್ಷರ ಗಾತ್ರ

ನವದೆಹಲಿ: ಕೊರೊನಾ ಸೋಂಕು ಪ್ರಸರಣವನ್ನು ತಪ್ಪಿಸಲು ಜನರಿಗೆ ಸೈಕಲ್‌ನಂತಹ ಮೋಟಾರುಯೇತರ ವಾಹನಗಳ ಬಳಕೆಗೆ ಉತ್ತೇಜನ ನೀಡಬೇಕು ಎಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ರಾಜ್ಯಗಳಿಗೆ ಸಲಹೆ ಮಾಡಿದೆ.

ಅಲ್ಲದೆ, ಸಾರ್ವಜನಿಕ ಸಾರಿಗೆ ಸಂಸ್ಥೆಗಳಲ್ಲಿ ನಗದುರಹಿತ ವಹಿವಾಟು ವ್ಯವಸ್ಥೆ ಜಾರಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದೂ ಸಚಿವಾಲಯ ಸಲಹೆ ಮಾಡಿದೆ.

ನ್ಯೂಯಾರ್ಕ್‌ನಲ್ಲಿ ಸೈಕಲ್‌ ಬಳಕೆಯನ್ನು ಉತ್ತೇಜಿಸಲು 40 ಮೈಲುಗಳ ನೂತನ ಪಥವನ್ನು ಸೇರ್ಪಡೆಗೊಳಿಸಲಾಗಿದೆ. ಒಕ್ಲ್ಯಾಂಡ್‌ ತನ್ನ ರಸ್ತೆಗಳಲ್ಲಿ ಶೇ 10ರಷ್ಟನ್ನು ಮೋಟಾರು ವಾಹನಗಳಿಗೆ ಬಂದ್‌ ಮಾಡಿದೆ.ಕೊಲಂಬಿಯಾದ ಬೊಗೊಟಾದಲ್ಲಿ ಒಂದೇ ರಾತ್ರಿಯಲ್ಲಿ 76 ಕಿ.ಮೀ ಉದ್ದದ ಮಾರ್ಗವನ್ನು ಸೈಕಲ್‌ ಸವಾರರಿಗಾಗಿ ಅಭಿವೃದ್ಧಿಪಡಿಸಲಾಗಿದೆ ಎಂದು ಸಚಿವಾಲಯವು ಉಲ್ಲೇಖಿಸಿದೆ.

ಉಳಿದಂತೆ, ರಾಜ್ಯಗಳಲ್ಲಿ ಮೆಟ್ರೊ ರೈಲು ಕಂಪನಿಗಳಿಗೆ ನೀಡಿರುವ ಪ್ರತ್ಯೇಕ ಸೂಚನೆಯಲ್ಲಿ ಸಚಿವಾಲಯದ ಕಾರ್ಯದರ್ಶಿ ದುರ್ಗಾ ಶಂಕರ್‌ ಮಿಶ್ರಾ ಅವರು, ದೇಶದಾದ್ಯಂತ ಮೋಟಾರು ರಹಿತ ಸಾರಿಗೆ ವ್ಯವಸ್ಥೆಗೆ ಪ್ರೋತ್ಸಾಹ ನೀಡುವುದು ಅಗತ್ಯವಾಗಿದೆ ಎಂದು ಪ್ರತಿಪಾದಿಸಿದ್ದಾರೆ.

ನಗರಗಳಲ್ಲಿ ಐದು ಕಿ.ಮೀ ಒಳಗಿನ ಪ್ರಯಾಣಕ್ಕಾಗಿ ಮೊಟಾರು ರಹಿತ ವಾಹನಗಳ ಬಳಕೆ ಉತ್ತಮ. ಕೋವಿಡ್‌–19 ಬಿಕ್ಕಟ್ಟಿನ ಸಂದರ್ಭದಲ್ಲಿ ಇದನ್ನು ಜಾರಿಗೊಳಿಸುವುದು ಸೂಕ್ತ. ಇದರ ಜಾರಿಗೆ ವೆಚ್ಚವೂ ಕಡಿಮೆ ಇದ್ದು, ಮಾನವ ಸಂಪನ್ಮೂಲದ ಬಳಕೆಯೂ ಹೆಚ್ಚು ಬೇಕಾಗದು ಎಂದಿದೆ.

ಪ್ರಯಾಣಿಕರಲ್ಲಿ ಸ್ಪಷ್ಟ ಭರವಸೆ ಮೂಡಿಸುವ ಕಾರ್ಯದೊಂದಿಗೆ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಪುನರಾರಂಭ ಮಾಡಬೇಕು. ಸಾರ್ವಜನಿಕ ವಹಿವಾಟಿನಲ್ಲಿ ಜನರ ಸಂಪರ್ಕ ತಪ್ಪಿಸಲು ಭೀಮ್‌, ಫೋನ್‌ ಪೇ, ಗೂಗಲ್ ಪೇ ಅಂತಹ ವ್ಯವಸ್ಥೆಯ ಬಳಕೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸಲಹೆ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT