ಇಸ್ಲಾಮಿಕ್ ಸ್ಟೇಟ್ಸ್‌ಗೂ, ಆರ್‌ಎಸ್‌ಎಸ್‌ಗೂ ಯಾವುದೇ ವ್ಯತ್ಯಾಸವಿಲ್ಲ: ಅಳಗಿರಿ

ಸೋಮವಾರ, ಮೇ 27, 2019
24 °C

ಇಸ್ಲಾಮಿಕ್ ಸ್ಟೇಟ್ಸ್‌ಗೂ, ಆರ್‌ಎಸ್‌ಎಸ್‌ಗೂ ಯಾವುದೇ ವ್ಯತ್ಯಾಸವಿಲ್ಲ: ಅಳಗಿರಿ

Published:
Updated:

ನವದೆಹಲಿ: ‘ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೂ (ಆರ್‌ಎಸ್‌ಎಸ್) ಭಯೋತ್ಪಾದನಾ ಸಂಘಟನೆಯಾದ ಇಸ್ಲಾಮಿಕ್‌ ಸ್ಟೇಟ್ಸ್‌ಗೂ (ಐಎಸ್‌) ಯಾವುದೇ ವ್ಯತ್ಯಸಾವಿಲ್ಲ’ ಎಂದು ತಮಿಳುನಾಡು ಕಾಂಗ್ರೆಸ್‌ ಮುಖ್ಯಸ್ಥ ಕೆ.ಎಸ್‌. ಅಳಗಿರಿ ಕುಟುಕಿದ್ದಾರೆ.

’ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕ ಒಬ್ಬ ಹಿಂದೂ’ ಎಂದು ಮಕ್ಕಳ್ ನೀತಿ ಮೈಯಂ(ಎಂಎನ್‌ಎಂ) ಪಕ್ಷದ ಸಂಸ್ಥಾಪಕ ಕಮಲ್‌ ಹಾಸನ್‌ ಅವರು ಹೇಳಿಕೆಯನ್ನು ನಾನು ಬೆಂಬಲಿಸುತ್ತೇನೆ ಮತ್ತು ಅದನ್ನು ಒಪ್ಪುತ್ತೇನೆ. ಶೇ 100ರಷ್ಟು ಅಲ್ಲ, ಶೇ 1000ದಷ್ಟು ಅದು ಸತ್ಯ’ ಎಂದು ಹೇಳಿದರು.

‘ಇಸ್ಲಾಮ್‌ ಬಗ್ಗೆ ಇಸ್ಲಾಮಿಕ್ ಸ್ಟೇಟ್ಸ್‌ ಹೇಗೆ ಆಲೋಚಿಸುತ್ತದೆಯೊ ಅದೇ ರೀತಿ ಹಿಂದುತ್ವದ ಬಗ್ಗೆ ಆರ್‌ಎಸ್‌ಎಸ್‌ ಯೋಚಿಸುತ್ತದೆ.  ಆರ್‌ಎಸ್‌ಎಸ್‌, ಜನಸಂಘ, ಹಿಂದೂ ಮಹಾಸಭಾ... ಇವೆಲ್ಲವೂ ನಂಬಿರುವುದು ಒಂದೇ. ಯಾರು ತಮ್ಮ ಸಿದ್ಧಾಂತಗಳನ್ನು ಒಪ್ಪುವುದಿಲ್ಲವೊ ಅವರನ್ನು ನಿರ್ನಾಮಗೊಳಿಸಬೇಕು ಎನ್ನುವುದು’ ಎಂದರು. 

‘ಅರಬ್‌ ದೇಶಗಳಲ್ಲಿ ಐಎಸ್‌ ಹೇಗಿದೆಯೊ ಇದೂ ಹಾಗೆಯೇ. ತಮ್ಮ ಸಿದ್ಧಾಂತಗಳನ್ನು ಒಪ್ಪದ ಮುಸ್ಲೀಮರನ್ನೂ ಉಳಿಸಬಾರದು ಎಂದೇ ಐಎಸ್‌ ಸಹ ಆ ದೇಶಗಳಲ್ಲಿ ಹೇಳುತ್ತದೆ. ತೀವ್ರ ಎಡಪಂಥೀಯರು ಮತ್ತು ತೀವ್ರ ಬಲಪಂಥೀಯರು ಒಂದೇ ನಿಯಮವನ್ನು ಪಾಲಿಸುತ್ತಾರೆ. ಧಾರ್ಮಿಕ ಮೂಲಭೂತವಾದಿಗಳೂ ಇದನ್ನೇ ನಂಬಿದ್ದಾರೆ’ ಎಂದು ವಿವರಿಸಿದರು.

ಬರಹ ಇಷ್ಟವಾಯಿತೆ?

 • 32

  Happy
 • 2

  Amused
 • 1

  Sad
 • 0

  Frustrated
 • 19

  Angry

Comments:

0 comments

Write the first review for this !