ವಾಯುದಾಳಿ ನಿಷ್ಕ್ರಿಯಕ್ಕೆ ಆಗಸದಲ್ಲೇ ಗುರಾಣಿ

7

ವಾಯುದಾಳಿ ನಿಷ್ಕ್ರಿಯಕ್ಕೆ ಆಗಸದಲ್ಲೇ ಗುರಾಣಿ

Published:
Updated:

ನವದೆಹಲಿ: ಭಾರತದ ಮೇಲೆ ಶತ್ರು ರಾಷ್ಟ್ರಗಳು ನಡೆಸುವ ಯಾವುದೇ ಸ್ವರೂಪದ ವಾಯುದಾಳಿಯನ್ನೂ ನಿಷ್ಕ್ರಿಯಗೊಳಿಸುವ ಸಾಮರ್ಥ್ಯ ಇರುವುದರಿಂದಲೇ ಎಸ್‌–400 ಟ್ರಯಂಪ್ ಕ್ಷಿಪಣಿ ವ್ಯವಸ್ಥೆಯ ಖರೀದಿಗೆ ಹೆಚ್ಚು ಮಹತ್ವ ಬಂದಿದೆ. ಚೀನಾ ಮತ್ತು ಪಾಕಿಸ್ತಾನದ ಜತೆಗೆ ಸಂಬಂಧ ಬಿಗಡಾಯಿಸುತ್ತಿದ್ದ ಸಂದರ್ಭದಲ್ಲಿ ಎಸ್‌–400 ಅನ್ನು ಖರೀದಿಸಲು ಭಾರತ ಆಸಕ್ತಿ ತೋರಿತ್ತು. ಈಗ ಖರೀದಿ ಒಪ್ಪಂದ ಅಂತಿಮಗೊಂಡಿದೆ. ಎಸ್‌–400ಗಳು ಭಾರತೀಯ ಸೇನೆಯ ಸಾಮರ್ಥ್ಯವನ್ನು ನಿಜಕ್ಕೂ ಹೆಚ್ಚಿಸಲಿದೆ ಎಂಬುದು ರಕ್ಷಣಾ ತಜ್ಞರ ಅಭಿಪ್ರಾಯ

 * ಚೀನಾ ಬಳಿ ಚೀನಾ ನಿರ್ಮಿತ ಯುದ್ಧವಿಮಾನಗಳು ಇವೆ. ರಷ್ಯಾ ನಿರ್ಮಿತ ಸುಖೋಯ್–35ಎಸ್ ಚಿನಾ ಬಳಿ ಇರುವ ಅತ್ಯಾಧುನಿಕ ಯುದ್ಧವಿಮಾನ. ಈ ವಿಮಾನವನ್ನೂ ಹೊಡೆದುರುಳಿಸುವ ಸಾಮರ್ಥ್ಯ ಈ ವ್ಯವಸ್ಥೆಗೆ ಇದೆ. ಆದರೆ ಚೀನಾ ಈಗಾಗಲೇ ಇಂತಹ 15 ಕ್ಷಿಪಣಿ ವ್ಯವಸ್ಥೆಗಳನ್ನು ಖರೀದಿಸಲು ರಷ್ಯಾದ ಜತೆ ಒಪ್ಪಂದ ಮಾಡಿಕೊಂಡಿದೆ. ಈಗಾಗಲೇ ಕೆಲವು ಯುನಿಟ್‌ಗಳ ಚೀನಾದಲ್ಲಿ ಕಾರ್ಯನಿರ್ವಹಿಸುತ್ತಿವೆ

* ಪಾಕಿಸ್ತಾನ ಸೇನೆಯ ಬಳಿ ಇರುವ ಎಲ್ಲಾ ಯುದ್ಧವಿಮಾನಗಳು ಮತ್ತು ಕಣ್ಗಾವಲು ವಿಮಾನಗಳ ಹಾರಾಟವನ್ನು ಪತ್ತೆ ಮಾಡುವ ಮತ್ತು ಅವನ್ನು ಆಗಸದಲ್ಲೇ ಹೊಡೆದುರುಳಿಸುವ ಸಾಮರ್ಥ್ಯ ಟ್ರಯಂಪ್ ವ್ಯವಸ್ಥೆಗೆ ಇದೆ

* ಅಮೆರಿಕದ ಅತ್ಯಾಧುನಿಕ ಮತ್ತು 5ನೇ ತಲೆಮಾರಿನ ಯುದ್ಧವಿಮಾನ ಎಫ್–35 ಅನ್ನೂ ಪತ್ತೆ ಮಾಡುವ ಸಾಮರ್ಥ್ಯ ಈ ಕ್ಷಿಪಣಿ ವ್ಯವಸ್ಥೆಗೆ ಇದೆ ಎಂದು ಸ್ವತಃ ಅಮೆರಿಕದ ರಕ್ಷಣಾ ಪರಿಣಿತರು ಹೇಳಿದ್ದಾರೆ. ಭಾರತವು ಈ ಕ್ಷಿಪಣಿ ವ್ಯವಸ್ಥೆ ಖರೀದಿಸಿದರೆ ಪಾಕಿಸ್ತಾನವು ಎಫ್‌–35 ಯುದ್ಧವಿಮಾನಗಳನ್ನು ಖರೀದಿಸದೇ ಇರುವ ಸಾಧ್ಯತೆ ಇರುತ್ತದೆ. ಹೀಗಾಗಿಯೇ ಈ ವ್ಯವಸ್ಥೆಯನ್ನು ಭಾರತ ಖರೀದಿಸುವುದನ್ನು ಅಮೆರಿಕ ವಿರೋಧಿಸುತ್ತಿದೆ ಎಂದೂ ರಾಜತಾಂತ್ರಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ

 

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !