ಶಬರಿಮಲೆ ತಂತ್ರಿ ಕುಟುಂಬ ಚರ್ಚೆಗೆ ಬರಲಿ, ಕಾದು ನೋಡೋಣ: ಪಿಣರಾಯಿ ವಿಜಯನ್

7

ಶಬರಿಮಲೆ ತಂತ್ರಿ ಕುಟುಂಬ ಚರ್ಚೆಗೆ ಬರಲಿ, ಕಾದು ನೋಡೋಣ: ಪಿಣರಾಯಿ ವಿಜಯನ್

Published:
Updated:

ತಿರುವನಂತಪುರಂ: ಶಬರಿಮಲೆಗೆ ಎಲ್ಲ ವಯಸ್ಸಿನ ಮಹಿಳೆಯರಿಗೆ ಪ್ರವೇಶಾನುಮತಿ ನೀಡಿರುವ ವಿಷಯದ ಬಗ್ಗೆ ಚರ್ಚಿಸಲು ಶಬರಿಮಲೆ ತಂತ್ರಿ ಕುಟುಂಬ ಬರುತ್ತಾರೆಯೇ ಎಂಬುದನ್ನು ಕಾದು ನೋಡೋಣ ಎಂದಿದ್ದಾರೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್.
ಈ ವಿಷಯದ ಬಗ್ಗೆ ಸರ್ಕಾರದೊಂದಿಗೆ ಚರ್ಚೆ ಮಾಡುವುದಿಲ್ಲ ಎಂದು ತಂತ್ರಿ ರಾಜೀವರು ಕಂದರಾರ್ ಹೇಳಿರುವುದರ ಬಗ್ಗೆ ಪಿಣರಾಯಿ ಈ  ರೀತಿ ಪ್ರತಿಕ್ರಿಯಿಸಿದ್ದಾರೆ.
ಸೋಮವಾರ ತಂತ್ರಿ ಕುಟುಂಬದೊಂದಿಗೆ ಸಭೆ ನಡೆಸುವುದಾಗಿ ತೀರ್ಮಾನಿಸಲಾಗಿತ್ತು. ಆದರೆ ತಾವು ಮುಖ್ಯಮಂತ್ರಿಯೊಂದಿಗೆ ಸಭೆ ನಡೆಸುವುದಿಲ್ಲ. ಸರ್ಕಾರ ಮೊದಲು ಸುಪ್ರೀಂಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಲಿ. ಆನಂತರವೇ ಮಾತುಕತೆ ನಡೆಸುತ್ತೇವೆ ಎಂದು ತಂತ್ರಿ ರಾಜೀವರು ಕಂದರಾರ್ ಹೇಳಿದ್ದಾರೆ.

ಏತನ್ಮಧ್ಯೆ,  ತಂತ್ರಿ ಅವರ ಕುಟುಂಬವನ್ನು ಮುಖ್ಯಮಂತ್ರಿ  ಚರ್ಚೆಗೆ ಕರೆದಿದ್ದಾರೆ ಎಂಬ ವಿಷಯ ನನಗೆ ಗೊತ್ತಿಲ್ಲ ಎಂದು ದೇವಸ್ವಂ ಸಚಿವ ಕಡಕಂಪಳ್ಳಿ ಸುರೇಂದ್ರನ್ ಹೇಳಿದ್ದಾರೆ. ಇದೀಗ ಪ್ರತಿಭಟನೆ ನಡೆಸುತ್ತಿರುವ ಬಿಜೆಪಿ ಜನರಲ್ಲಿ ಗೊಂದಲ ಸೃಷ್ಟಿಸುತ್ತಿದೆ ಎಂದಿದ್ದಾರೆ ಸಚಿವರು.

ತಂತ್ರಿ ಕುಟುಂಬ ಮತ್ತು ಪಂದಳಂ ರಾಜಮನೆತನ ಮತ್ತು ಎನ್ಎಸ್‍ಎಸ್ ಜತೆಯಾಗಿ ಪಿಣರಾಯಿ ವಿಜಯನ್ ಜತೆ ಚರ್ಚೆ ನಡೆಸುವುದಾಗಿ ನಿಗದಿಯಾಗಿತ್ತು. ಆದರೆ ನ್ಯಾಯಾಲಯದ ತೀರ್ಪು ಅನುಷ್ಠಾನದ ಬಗ್ಗೆ  ಚರ್ಚೆ ಅನಗತ್ಯ ಎಂದು ಪಂದಳಂ ರಾಜಮನೆತನ ಹೇಳಿದೆ.

ಬರಹ ಇಷ್ಟವಾಯಿತೆ?

 • 3

  Happy
 • 1

  Amused
 • 1

  Sad
 • 0

  Frustrated
 • 3

  Angry

Comments:

0 comments

Write the first review for this !