ಶಬರಿಮಲೆ ವಿವಾದ: ತೀವ್ರಗೊಂಡ ಪ್ರತಿಭಟನೆ

7

ಶಬರಿಮಲೆ ವಿವಾದ: ತೀವ್ರಗೊಂಡ ಪ್ರತಿಭಟನೆ

Published:
Updated:
Deccan Herald

ತಿರುವನಂತಪುರ: ಎಲ್ಲ ವಯಸ್ಸಿನ ಮಹಿಳೆಯರಿಗೆ ಶಬರಿಮಲೆ ದೇವಾಲಯ ಪ್ರವೇಶಕ್ಕೆ ಅನುಮತಿ ನೀಡಿರುವ ಸುಪ್ರೀಂ ಕೋರ್ಟ್‌ ಆದೇಶವನ್ನು ಜಾರಿಗೊಳಿಸುವ ರಾಜ್ಯ ಸರ್ಕಾರದ ತೀರ್ಮಾನವನ್ನು ವಿರೋಧಿಸಿ ವಿವಿಧ ಸಂಘಟನೆಗಳು ಬುಧವಾರ ಕೂಡ ರಾಜ್ಯದಾದ್ಯಂತ ರಸ್ತೆ ತಡೆ ಹಾಗೂ ರ‍್ಯಾಲಿ ನಡೆಸಿದವು.

‘ಶಬರಿಮಲೆ ಅಯ್ಯಪ್ಪ ದೇವಾಲಯದ ಆಚರಣೆಗಳನ್ನು ರಕ್ಷಿಸಿ’ ಎಂಬ ಘೋಷಣೆ ಕೂಗುತ್ತಾ ಭಾರಿ ಸಂಖ್ಯೆಯಲ್ಲಿ ಮಹಿಳೆಯರು ಹಾಗೂ ಭಕ್ತರು ಪ್ರತಿಭಟನಾ ಮೆರವಣಿಗೆಗಳಲ್ಲಿ ಪಾಲ್ಗೊಂಡಿದ್ದರು.

ಕೇರಳದ ಮುಜರಾಯಿ ಖಾತೆ ಸಚಿವ ಕಡಗಂಪಳ್ಳಿ ಸುರೇಂದ್ರನ್‌ ಅವರಿಗೆ ಬಿಜೆಪಿ ಕಾರ್ಯಕರ್ತರು ತಿರುವನಂತಪುರದ ಕಳಕೂಟ್ಟಂನಲ್ಲಿ ಕಪ್ಪು ಬಾವುಟ ಪ್ರದರ್ಶಿಸಿದ್ದಾರೆ.

ಪಟ್ಟನಂತಿಟ್ಟ ಜಿಲ್ಲೆಯ ಪಂದಳಂನಿಂದ ಎನ್‌ಡಿಎ ನೇತೃತ್ವದ ರ್‍ಯಾಲಿ ಬುಧವಾರ ಆರಂಭಗೊಂಡಿದ್ದು, ಅಕ್ಟೋಬರ್‌ 15ರಂದು ತಿರುವನಂತಪುರದಲ್ಲಿ ಕೊನೆಗೊಳ್ಳಲಿದೆ.

ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ಪಿ.ಎಸ್‌. ಶ್ರೀಧರನ್‌ ಪಿಳ್ಳೆ ಮತ್ತು ಭಾರತ್‌ ಧರ್ಮ ಜನ ಸೇನಾ (ಬಿಡಿಜೆಎಸ್‌) ಅಧ್ಯಕ್ಷ ತುಷಾರ್‌ ವೆಳ್ಳಪಳ್ಳಿ ಈ ರ‍್ಯಾಲಿಯ ನೇತೃತ್ವ ವಹಿಸಿದ್ದಾರೆ.

‘ಕೇರಳ ಸರ್ಕಾರ ಶಬರಿಮಲೆ ದೇವಾಲಯವನ್ನು ನಾಶಗೊಳಿಸಲು ಯತ್ನಿಸುತ್ತಿದೆ’ ಎಂದು ಶ್ರೀಧರನ್‌ ಪಿಳ್ಳೆ ಆರೋಪಿಸಿದ್ದಾರೆ.

ನಾಯರ್‌ ಸೇವಾ ಸಂಸ್ಥೆಯ (ಎನ್‌ಎಸ್‌ಎಸ್‌) ನೇತೃತ್ವದಲ್ಲಿ ತಿರುವನಂತಪುರದಲ್ಲಿ ಬೃಹತ್‌ ರ‍್ಯಾಲಿ ನಡೆದಿದೆ.

ಎರ್ನಾಕುಳಂ ಜಿಲ್ಲೆಯ ಆಲುವಾ ಮತ್ತು ಮೂವಾಟ್ಟುಪುಳದಲ್ಲಿ ಪ್ರತಿಭಟನಾಕಾರರರು ಮತ್ತು ಸಾರ್ವಜನಿಕರ ನಡುವೆ ಸಣ್ಣ ಪ್ರಮಾಣದಲ್ಲಿ ಘರ್ಷಣೆ ನಡೆದಿತ್ತು.

ಇವನ್ನೂ ಓದಿ...

‘ಶಬರಿಮಲೆ ದೇಗುಲಕ್ಕೆ ಮಹಿಳೆಯರು ಹೋಗಬಹುದು’ ಸುಪ್ರೀಂಕೋರ್ಟ್

ಶಬರಿಮಲೆ ಪ್ರತಿಭಟನೆ: ಸುದ್ದಿ ಪ್ರಕಟಿಸಲು ಮಾಧ್ಯಮಗಳ ಮೇಲೆ ಬೆದರಿಕೆ ತಂತ್ರ

ಶಬರಿಮಲೆ ರಕ್ಷಣೆಗೆ ಬುಡಕಟ್ಟು ಜನರ ಕಣ್ಗಾವಲು
 

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !