ಮಂಗಳವಾರ, ನವೆಂಬರ್ 12, 2019
20 °C
ಹಿಂದೂ ಮಹಾಸಭಾ ನಾಯಕರ ಹೇಳಿಕೆಗೆ ವಿರೋಧ, ಪ್ರತಿಭಟನೆ

‘ಆರೋಪಿಸಿದವರು ವಿಷಕನ್ಯೆಯರು’

Published:
Updated:

ಲಖನೌ: ಉತ್ತರ ಪ್ರದೇಶದ ಕಾನೂನು ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಎದುರಿಸುತ್ತಿರುವ ಕೆಂದ್ರದ ಮಾಜಿ ಸಚಿವ, ಬಿಜೆಪಿ ಮುಖಂಡ ಸ್ವಾಮಿ ಚಿನ್ಮಯಾನಂದ ಅವರು ನಿರ್ದೋಷಿ ಎಂದು ಅಖಿಲ ಭಾರತ ಹಿಂದೂ ಮಹಾಸಭಾದ ಪೋಷಕ ಸ್ವಾಮಿ ಓಂ ಹಾಗೂ ಮುಕೇಶ್‌ ಜೈನ್ ಹೇಳಿದ್ದಾರೆ. ಅವರ ವಿರುದ್ಧ ಆರೋಪ ಮಾಡಿರುವ ವಿದ್ಯಾರ್ಥಿನಿಯನ್ನು ‘ವಿಷಕನ್ಯೆ’ ಎಂದು ಇವರು ಟೀಕಿಸಿದ್ದಾರೆ.

‘ವಿಷಕನ್ಯೆಯರು, ವಿಶೇಷವಾಗಿ ಶಹಜಹಾನ್‌ಪುರದ ವಿಷಕನ್ಯೆಯರು ಸಂತರನ್ನು ಬಲೆಗೆ ಬೀಳಿಸುತ್ತಿದ್ದಾರೆ’ ಎಂದು ಇವರಿಬ್ಬರು ಹೇಳಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಕಾಕತಾಳೀಯವೆಂದರೆ, ಹಿಂದೆ ಆಸಾರಾಂ ಬಾಪು ವಿರುದ್ಧ ಅತ್ಯಾಚಾರದ ಆರೋಪ ಹೊರಿಸಿದಮಹಿಳೆಯು ಸಹ ಶಹಜಹಾನ್‌ಪುರದವರೇ ಆಗಿದ್ದರು.

 

ಪ್ರತಿಕ್ರಿಯಿಸಿ (+)