ಮಂಗಳವಾರ, ಏಪ್ರಿಲ್ 20, 2021
26 °C

ಶರವಣ ಭವನ ಮಾಲೀಕ ಪಿ.ರಾಜಗೋಪಾಲ್ ನಿಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೆನ್ನೈ: ‘ಶರವಣ ಭವನ’ದ ಮಾಲೀಕ ಪಿ.ರಾಜಗೋಪಾಲ್ (72) ಗುರುವಾರ (ಇಂದು) ನಿಧನರಾದರು. ಚಿಲ್ಲರೆ ಅಂಗಡಿಯಿಂದ ಬದುಕು ಆರಂಭಿಸಿದ ಸಾಮಾನ್ಯ ವ್ಯಕ್ತಿಯೊಬ್ಬ ವಿಶ್ವದ ಹಲವು ದೇಶಗಳಲ್ಲಿ ಹರಡಿಕೊಂಡಿರುವ ಶರವಣ ಭವನದಂಥ ದೊಡ್ಡ ಹೋಟೆಲ್ ಸಾಮ್ರಾಜ್ಯ ಕಟ್ಟಿದ ಅವರ ಯಶೋಗಾಥೆ ದೇಶದ ಗಮನ ಸೆಳೆದಿತ್ತು.

ಆದರೆ ತನ್ನ ಹೋಟೆಲ್‌ನಲ್ಲಿ ನೌಕರನಾಗಿದ್ದ ವ್ಯಕ್ತಿಯ ಹೆಂಡತಿಯನ್ನು ಮೂರನೇ ಮದುವೆಯಾಗುವ ಪ್ರಯತ್ನ ಅವರ ಜೀವನದ ಎಲ್ಲ ಯಶಸ್ಸುಗಳನ್ನೂ ಮಣ್ಣುಗೂಡಿಸಿತ್ತು. ನ್ಯಾಯಾಲಯದಲ್ಲಿ ಸುದೀರ್ಘ ವಾದ–ಪ್ರತಿವಾದದ ನಂತರ ಚೆನ್ನೈ ಹೈಕೋರ್ಟ್‌ ಅವರನ್ನು ದೋಷಿ ಎಂದು ಘೋಷಿಸಿ, ಶಿಕ್ಷೆ ವಿಧಿಸಿತ್ತು. ಹೈಕೋರ್ಟ್ ಆದೇಶವನ್ನು ಎತ್ತಿಹಿಡಿದಿದ್ದ ಸುಪ್ರೀಂಕೋರ್ಟ್‌ ಜುಲೈ 7ರಂದು ಶರಣಾಗುವಂತೆ ಆದೇಶಿಸಿತ್ತು.

ಕೆಲ ದಿನಗಳ ಹಿಂದಷ್ಟೇ ಅವರಿಗೆ ಹೃದಯಾಘಾತವಾಗಿತ್ತು. ಅಪಹರಣ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜುಲೈ 9ರಂದು ನ್ಯಾಯಾಲಯಕ್ಕೆ ಶರಣಾದ ನಂತರ ಅವರ ಆರೋಗ್ಯ ಸಂಪೂರ್ಣ ಹದಗೆಟ್ಟಿತ್ತು.

ಶರವಣ ಭವನದ ನೌಕರನಾಗಿದ್ದ ಶಾಂತಕುಮಾರ್‌ನ ಪತ್ನಿಯನ್ನು ಮೂರನೇ ಮದುವೆಯಾಗಲು ರಾಜಗೋಪಾಲ್‌ ಬಯಸಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರಿಂದ ನೌಕರನನ್ನು ಅಪಹರಿಸಿ 2001ರಲ್ಲಿ ಕೊಲೆ ಮಾಡಲಾಗಿತ್ತು. ಕೊಲೆ ಪ್ರಕರಣದಲ್ಲಿ ಗೋಪಾಲ್‌ಗೆ ಮದ್ರಾಸ್‌ ಹೈಕೋರ್ಟ್‌ ನೀಡಿದ್ದ ಜೀವಾವಧಿ ಶಿಕ್ಷೆಯನ್ನು ಸುಪ್ರಿಂ ಕೋರ್ಟ್‌ ಎತ್ತಿ ಹಿಡಿದಿತ್ತು.

ಇದನ್ನೋ ಓದಿ: ಸಾಮ್ರಾಜ್ಯ ಕಟ್ಟಿದ ಚಾಯ್‌ ವಾಲಾ, ಹೆಣ್ಣಿಗೆ ಹಾತೊರೆದು ಹಾಳಾದ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.