ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪಘಾತದಿಂದ ಗಾಂಧಿ ಸಾವು: ವಿವಾದ ಸೃಷ್ಟಿಸಿದ ಕಿರುಪುಸ್ತಕ

Last Updated 15 ನವೆಂಬರ್ 2019, 19:45 IST
ಅಕ್ಷರ ಗಾತ್ರ

ಭುವನೇಶ್ವರ: ಒಡಿಶಾ ಸರ್ಕಾರ ಹೊರತಂದಿರುವ ಕಿರುಪುಸ್ತಕದಲ್ಲಿ ಮಹಾತ್ಮ ಗಾಂಧಿ ಅವರು ಅಪಘಾತದಿಂದ ಸಾವನ್ನಪ್ಪಿದ್ದಾರೆ ಎಂದು ನಮೂದಿಸಿರುವುದು ವಿವಾದಕ್ಕೆ ಕಾರಣವಾಗಿದೆ.

’ಈ ಪ್ರಮಾದವನ್ನು ಸರಿಪಡಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು ಮತ್ತು ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಕ್ಷಮೆ ಯಾಚಿಸಬೇಕು‘ ಎಂದು ರಾಜಕೀಯ ಮುಖಂಡರು ಮತ್ತು ಸಾಮಾಜಿಕ ಕಾರ್ಯಕರ್ತರು ಒತ್ತಾಯಿಸಿದ್ದಾರೆ.

ಗಾಂಧಿ ಅವರ 150ನೇ ಜಯಂತಿ ಅಂಗವಾಗಿ, ಅವರ ಬೋಧನೆ, ಒಡಿಶಾ ಜೊತೆಗಿನ ನಂಟಿನ ಕುರಿತು ಹೊರ ತಂದಿರುವ ಎರಡು ಪುಟಗಳ ಕಿರು ಪುಸ್ತಕದಲ್ಲಿ ಈ ಪ್ರಮಾದ ನಡೆದಿದೆ.

‘1948 ಜನವರಿ 30ರಂದು ದೆಹಲಿಯ ಬಿರ್ಲಾ ಹೌಸ್‌ನಲ್ಲಿ ಆಕಸ್ಮಿಕ ಕಾರಣಗಳಿಂದ ಗಾಂಧಿ ಸಾವನ್ನಪ್ಪಿದ್ದಾರೆ’ಎಂದು ಇದರಲ್ಲಿ ಉಲ್ಲೇಖಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT