ಮಹಾರಾಷ್ಟ್ರದಲ್ಲಿ ಬಿಜೆಪಿಯ ‘ಮಿಷನ್ 45’

7
ಲೋಕಸಭೆ ಚುನಾವಣೆ 2019

ಮಹಾರಾಷ್ಟ್ರದಲ್ಲಿ ಬಿಜೆಪಿಯ ‘ಮಿಷನ್ 45’

Published:
Updated:

ಪುಣೆ: ಮಹಾರಾಷ್ಟ್ರದ 48 ಲೋಕಸಭಾ ಕ್ಷೇತ್ರಗಳಲ್ಲಿ 45 ಕ್ಷೇತ್ರಗಳನ್ನಾದರೂ ಗೆಲ್ಲಲೇಬೇಕು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ಪಕ್ಷದ ರಾಜ್ಯ ಘಟಕದ ನಾಯಕರಿಗೆ ಗುರಿ ನೀಡಿದ್ದಾರೆ.

ಪುಣೆ, ಬಾರಾಮತಿ ಮತ್ತು ಶಿರೂರ್‌ನಲ್ಲಿ ಪಕ್ಷದ ಕಾರ್ಯಕರ್ತರ ಜತೆ ನಡೆಸಿದ ಸಭೆ ವೇಳೆ ಅವರು ಈ ಮಾತು ಹೇಳಿದ್ದಾರೆ.

‘ಬಿಜೆಪಿ ಮತ್ತು ಎನ್‌ಡಿಎ ಮೈತ್ರಿಕೂಟದ ಪಕ್ಷಗಳು 45 ಕ್ಷೇತ್ರಗಳನ್ನಾದರೂ ಗೆಲ್ಲಲೇಬೇಕು. 45ಕ್ಕಿಂತ ಕಡಿಮೆ ಸ್ಥಾನಗಳಲ್ಲಿ ಗೆದ್ದರೆ, ಅದು ನಮ್ಮ ಗೆಲುವಲ್ಲ’ ಎಂದು ಅವರು ಕಾರ್ಯಕರ್ತರನ್ನು ಉತ್ತೇಜಿಸಿದ್ದಾರೆ.

ಎನ್‌ಸಿಪಿ ನಾಯಕ ಶರದ್ ಪವಾರ್ ಪ್ರಾಬಲ್ಯವಿರುವ ಬಾರಾಮತಿಯಲ್ಲೂ ಬಿಜೆಪಿ ಗೆಲ್ಲಬೇಕು ಎಂದು ಷಾ ಹೇಳಿದ್ದಾರೆ. ‘45 ಕ್ಷೇತ್ರಗಳನ್ನು ಗೆಲ್ಲಬೇಕು ಎಂದರೆ ಬಾರಾಮತಿಯನ್ನೂ ಬಿಜೆಪಿ ಗೆಲ್ಲಬೇಕು’ ಎಂದು ಅವರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !