ಗುರುವಾರ , ಸೆಪ್ಟೆಂಬರ್ 16, 2021
24 °C

ಭಾರತದಲ್ಲಿಯೂ ಬುರ್ಖಾ ನಿಷೇಧವಾಗಲಿ: ಶಿವಸೇನೆ

ಏಜನ್ಸಿಸ್ Updated:

ಅಕ್ಷರ ಗಾತ್ರ : | |

ಮುಂಬೈ: ಶ್ರೀಲಂಕಾದಲ್ಲಿ ಭದ್ರತಾ ದೃಷ್ಟಿಯಿಂದ ಬುರ್ಖಾ ನಿಷೇಧ ಮಾಡಿದ ಬೆನ್ನಲ್ಲೇ, ಭಾರತದಲ್ಲೂ ಬುರ್ಖಾ ನಿಷೇಧ ಮಾಡಬೇಕು ಎಂಬ ಕೂಗು ಕೇಳಿ ಬಂದಿದೆ. ರಾವಣನ ದೇಶದಲ್ಲೇ ಬುರ್ಖಾ ನಿಷೇಧಗೊಂಡಿರುವಾಗ ರಾವಣನ ದೇಶದಲ್ಲಿ ಏಕಿಲ್ಲ ಎಂದು ಮಹಾರಾಷ್ಟ್ರದ ಶಿವಸೇನೆ ಪ್ರಶ್ನೆ ಮಾಡಿದೆ.

ಬುರ್ಖಾ ನಿಷೇಧವನ್ನು ನಾವು ಈ ಹಿಂದೆಯೇ ಪ್ರಸ್ತಾಪಿಸಿದ್ದೆವು. ಆದರೆ, ರಾವಣನ ದೇಶದಲ್ಲಿ ಮೊದಲು ಜಾರಿಯಾಗಿದೆ. ರಾಮನ ನಾಡಾದ ಭಾರತದಲ್ಲಿ ಏಕಿಲ್ಲ. ಭದ್ರತೆ ಒದಿಗಿಸುವಾಗ ರಕ್ಷಣಾ ಪಡೆಗಳಿಗೆ ಗುರುತು ಪತ್ತೆ ಕಷ್ಟವಾಗಬಾರದು. ಅದಕ್ಕಾಗಿಯೇ ಬುರ್ಕಾ ನಿಷೇಧ ಮಾಡುವ ಮೂಲಕ ರಕ್ಷಣಾ ಪಡೆಗಳಿಗೆ ನೆರವಾಗಬೇಕು. ಜನ ಬುರ್ಖಾ ಧರಿಸುವುದರಿಂದ ದೇಶದ ಭದ್ರತೆಗೆ ದಕ್ಕೆಯಾಗಲಿದೆ ಎಂದು ಶಿವಸೇನೆಯು ತನ್ನ ಮುಖವಾಣಿ 'ಸಾಮ್ನಾ' ದ ಸಂಪಾದಕೀಯದಲ್ಲಿ ಬರೆದುಕೊಂಡಿದೆ.

ಯಾವ ಸಂಪ್ರದಾಯ ದೇಶದ ಭದ್ರತೆ ವಿಚಾರದಲ್ಲಿ ಹಸ್ತಕ್ಷೇಪ ಮಾಡುತ್ತದೆಯೋ ಅದಕ್ಕೆ ನಾವು ಇತಿಶ್ರೀ ಹಾಕಬೇಕು ಎಂದೂ ಸಾಮ್ನದಲ್ಲಿ ಬರೆಯಲಾಗಿದೆ.

ಶ್ರೀಲಂಕಾದಲ್ಲಿ ಈಸ್ಟರ್‌ ಹಬ್ಬದ ದಿನ ಸಂಭವಿಸಿದ ಆತ್ಮಾಹುತಿ ದಾಳಿಯಿಂದಾಗಿ ಅಲ್ಲಿ 250ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದರು. ಉಗ್ರ ಸಂಘಟನೆ ಐಎಸ್‌ಐಎಸ್‌ ಈ ದಾಳಿಯ ಹೊಣೆ ಹೊತ್ತಿತ್ತು. ಅಲ್ಲದೆ, ಸರಣಿ ಸ್ಫೋಟಗಳು ನಿಲ್ಲದ ಹಿನ್ನೆಲೆಯಲ್ಲಿ, ಉಗ್ರರು ಮಾರು ವೇಷದಲ್ಲಿ ದಾಳಿ ನಡೆಸುವ ಸಾಧ್ಯತೆಗಳಿದ್ದ ಕಾರಣಕ್ಕೆ ದೇಶದಲ್ಲಿ ಬುರ್ಕಾ ಧರಿಸುವುದನ್ನು ನಿಷೇಧಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು