ಶನಿವಾರ, ಜನವರಿ 25, 2020
28 °C

ರಮೇಶ್‌ ಜಾರಕಿಹೊಳಿ ಗುಣಮುಖರಾದ ನಂತರ ಪಕ್ಷ ಸೇರ್ಪಡೆ ಬಗ್ಗೆ ಚಿಂತನೆ: ಸಿದ್ದರಾಮಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ರಮೇಶ್‌ ಜಾರಕಿಹೊಳಿ ಅವರು ಸಂಪೂರ್ಣ ಗುಣಮುಖರಾದ ನಂತರ ಅವರನ್ನು ನಮ್ಮ ಪಕ್ಷಕ್ಕೆ‌ ಸೇರಿಸಿಕೊಳ್ಳುವ ಬಗ್ಗೆ ಯೋಚನೆ ಮಾಡುತ್ತೇವೆ,’ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್‌ ಮಾಡಿದ್ದಾರೆ. 

‘ಬಿಜೆಪಿ ಎನ್ನುವುದು ತಲೆಕೆಡಿಸುವ ಕಾರ್ಖಾನೆ. ರಮೇಶ್ ಜಾರಕಿಹೊಳಿ ನಮ್ಮ ಜತೆ‌ ಇರುವಾಗ ಸರಿಯಾಗಿದ್ದರು, ಈಗ ಅಲ್ಲಿದವರ ಹಾಗೆಯೇ ಆಗಿಬಿಟ್ಟಿದ್ದಾರೆ. ನಮ್ಮಿಂದ ಯಾರೂ ಬಿಜೆಪಿ ಸೇರೊಲ್ಲ. ರಮೇಶ್ ಸಂಪೂರ್ಣ ಗುಣಮುಖರಾದ ನಂತರ ಅವರನ್ನು ನಮ್ಮ ಪಕ್ಷಕ್ಕೆ‌ ಸೇರಿಸಿಕೊಳ್ಳುವ ಬಗ್ಗೆ ಯೋಚನೆ ಮಾಡ್ತೇವೆ,’ ಎಂದು ಸಿದ್ದರಾಮಯ್ಯ ಟ್ವೀಟ್‌ ಮಾಡಿದ್ದಾರೆ. 

ಗೋಕಾಕದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ್ದ ರಮೇಶ ಜಾರಕಿಹೊಳಿ, ‘ಮುಂದಿನ ದಿನಗಳಲ್ಲಿ ಸಿದ್ದರಾಮಯ್ಯ ಅವರನ್ನು ಬಿಜೆಪಿಗೆ ಕರೆ ತರುತ್ತೇನೆ. ಸಿದ್ದರಾಮಯ್ಯ ನನ್ನ ಬಗ್ಗೆ ವೈಯಕ್ತಿಕ ಟೀಕೆ ಮಾಡಿಲ್ಲ. ಟೀಕೆ ಮಾಡಿದ್ದರೆ ನಾನು ಬಿಡುತ್ತಿರಲಿಲ್ಲ,’ ಎಂದಿದ್ದರು.

ರಮೇಶ ಜಾರಕಿಹೊಳಿ ಅವರ ಈ ಹೇಳಿಕೆ ಸಿದ್ದರಾಮಯ್ಯ ಅವರಿಗೆ ಆಕ್ರೋಶ ತರಿಸಿದ್ದು, ಇಂದು ಟ್ವಿಟರ್‌ ಮೂಲಕ ರಮೇಶ ಅವರಿಗೆ ತಿವಿದಿದ್ದಾರೆ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು