ಬುಧವಾರ, ಏಪ್ರಿಲ್ 1, 2020
19 °C

ಎಸ್‌ಪಿಜಿ ತಿದ್ದುಪಡಿಗೆ ಲೋಕಸಭೆ ಒಪ್ಪಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ : ವಿಶೇಷ ರಕ್ಷಣಾ ಪಡೆ (ಎಸ್‌ಪಿಜಿ) ತಿದ್ದುಪಡಿ ಮಸೂದೆಗೆ ಲೋಕಸಭೆ ಬುಧವಾರ ಅನುಮೋದನೆ ನೀಡಿದೆ. ಇದರಿಂದಾಗಿ, ಕಾಂಗ್ರೆಸ್‌ ಅಧ್ಯಕ್ಷೆಸೋನಿಯಾ ಗಾಂಧಿ ಮತ್ತು ಅವರ ಕುಟುಂಬದ ಸದಸ್ಯರಿಗೆ ಇನ್ನು ಮುಂದೆ ಎಸ್‌ಪಿಜಿ ಭದ್ರತೆ ದೊರೆಯುವುದಿಲ್ಲ.

ಕಾಂಗ್ರೆಸ್‌, ಡಿಎಂಕೆ ಮತ್ತು ಎಡಪಕ್ಷಗಳ ಸದಸ್ಯರ ಸಭಾತ್ಯಾಗದ ನಡುವೆ ಈ ಮಸೂದೆಗೆ ಲೋಕಸಭೆ ಧ್ವನಿಮತದ ಮೂಲಕ ಒಪ್ಪಿಗೆ ಸೂಚಿಸಿತು.

ತಿದ್ದುಪಡಿ ಅನ್ವಯ, ಮಾಜಿ ಪ್ರಧಾನಿಗಳು ಮತ್ತು ಅವರ ಜತೆ ವಾಸಿಸುವ ಕುಟುಂಬದ ಸದಸ್ಯರಿಗೂ ಎಸ್‌ಪಿಜಿ ರಕ್ಷಣೆ ಒದಗಿಸಲಿದೆ. ಆದರೆ, ಅಧಿಕಾರ ತೊರೆದ ದಿನಾಂಕದಿಂದ ಐದು ವರ್ಷಗಳ ಕಾಲ ಸರ್ಕಾರದಿಂದ ಹಂಚಿಕೆಯಾದ ನಿವಾಸದಲ್ಲಿ ವಾಸಿಸುವ ಮಾಜಿ ಪ್ರಧಾನಿ ಮತ್ತು ಅವರ ತಕ್ಷಣದ ಕುಟುಂಬದ ಸದಸ್ಯರಿಗೆ ಮಾತ್ರ ಇದು ಅನ್ವಯವಾಗಲಿದೆ.

ಇ–ಸಿಗರೇಟ್‌ ನಿಷೇಧ: ಎಲೆಕ್ಟ್ರಾನಿಕ್‌ ಸಿಗರೇಟ್‌ ನಿಷೇಧಿಸುವ ಮಸೂದೆಗೂ ಲೋಕಸಭೆ ಅನುಮೋದನೆ ನೀಡಿತು. ಈ ಮುಂಚೆ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿತ್ತು. ಲೋಕಸಭೆ ದಮನ್‌–ದಿಯು  ಹಾಗೂ ದಾದ್ರ ಮತ್ತು ನಗರ್‌ ಹವೇಲಿ ವಿಲೀನಗೊಳಿಸುವ ಮಸೂದೆಗೂ ಅನುಮೋದನೆ ನೀಡಿತು.

ಸೋನಿಯಾ ಕುಟುಂಬಕ್ಕೆ ನೀಡಿರುವ ಭದ್ರತೆ ವಾಪಸ್‌ ಪಡೆದಿಲ್ಲ. ಅವರಿಗೆ ‘ಝಡ್‌–ಪ್ಲಸ್‌’ ಭದ್ರತೆ ಒದಗಿಸಲಾಗಿದೆ. ಬಿಜೆಪಿ ಯಾರ ವಿರುದ್ಧವೂ ದ್ವೇಷ ಸಾಧಿಸುತ್ತಿಲ್ಲ.
-ಅಮಿತ್‌ ಶಾ, ಕೇಂದ್ರ ಗೃಹ ಸಚಿವ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು