ಸೋಮವಾರ, ಮಾರ್ಚ್ 30, 2020
19 °C

ಇರಾನ್‌ನಿಂದ ಬಂದವರು ಸ್ಪೈಸ್ ಜೆಟ್ ಮೂಲಕ ಜೋಧ್‌‌ಪುರಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ(ಪಿಟಿಐ): ಇರಾನ್‌ನಿಂದ ಹಿಂದಿರುಗಿದ 142 ಭಾರತೀಯರನ್ನು ದೆಹಲಿಯಿಂದ ಜೋಧಪುರಕ್ಕೆ ವಿಶೇಷ ವಿಮಾನದ ಮೂಲಕ ಭಾನುವಾರ ಕರೆತರಲಾಗುವುದು ಎಂದು ಸ್ಪೈಸ್‌ಜೆಟ್‌ ಗುರುವಾರ ತಿಳಿಸಿದೆ.

‘ಜೋಧಪುರದಲ್ಲಿ ಅವರೆಲ್ಲರನ್ನೂ ಪ್ರತ್ಯೇಕವಾಗಿರಿಸಲು ಸರ್ಕಾರ ವ್ಯವಸ್ಥೆ ಕಲ್ಪಿಸಿದೆ. ಸರ್ಕಾರದ ಮನವಿ ಮೇರೆಗೆ ವಿಶೇಷ ವಿಮಾನದ ವ್ಯವಸ್ಥೆ ಮಾಡಲಾಗಿದೆ’ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಸಂಸ್ಥೆ ತಿಳಿಸಿದೆ.  

‘ಈ ವಿಶೇಷ ವಿಮಾನ ದೆಹಲಿಗೆ ಹಿಂದಿರುಗಿದ ನಂತರ ಸಂಪೂರ್ಣ ಸ್ವಚ್ಛಗೊಳಿಸಿ, ಕೀಟನಾಶಕ ಸಿಂಪಡಿಸಲಾಗುವುದು. ವಿಮಾನದ ಸಿಬ್ಬಂದಿಗೆ ಸಮಸ್ಯೆಯಾಗದಂತೆ ಎಲ್ಲ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗುವುದು. ದೆಹಲಿಯಿಂದ ಬೆಳಿಗ್ಗೆ 1 ಗಂಟೆ 40 ನಿಮಿಷಕ್ಕೆ ಹೊರಡುವ ಈ ವಿಮಾನ ಜೋಧಪುರಕ್ಕೆ ಬೆಳಿಗ್ಗೆ 2.55ಕ್ಕೆ ತಲುಪಲಿದೆ’ ಎಂದು ಸಂಸ್ಥೆ ತಿಳಿಸಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು