ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷಮಾದಾನ ಅರ್ಜಿ ತಿರಸ್ಕರಿಸಿದ್ದನ್ನು ಪರಿಶೀಲಿಸಬೇಕು ಎಂಬ ಮನವಿ ತಳ್ಳಿದ ಸುಪ್ರೀಂ

Last Updated 13 ಫೆಬ್ರುವರಿ 2020, 7:51 IST
ಅಕ್ಷರ ಗಾತ್ರ

ನವದೆಹಲಿ: ನಿರ್ಭಯಾ ಅತ್ಯಾಚಾರ ಪ್ರಕರಣದ ಅಪರಾಧಿ ವಿನಯ್‌ ಕುಮಾರ್‌ ಶರ್ಮಾ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿ ತಿರಸ್ಕರಿಸಿದ್ದರು. ಈ ಅರ್ಜಿ ತಿರಸ್ಕೃತವಾಗಿರುವಬಗ್ಗೆ ಅವಲೋಕನನಡೆಸಬೇಕು ಎಂದು ವಿನಯ್ ಕುಮಾರ್ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಈ ಅರ್ಜಿಯನ್ನುಕೋರ್ಟ್ ಗುರುವಾರ ತಿರಸ್ಕರಿಸಿದೆ.

ಕ್ಷಮಾದಾನ ಅರ್ಜಿಯನ್ನುತಿರಸ್ಕರಿಸಿರುವಶಿಫಾರಸಿಗೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ಮತ್ತು ಗೃಹ ಸಚಿವರು ಸಹಿ ಹಾಕಿಲ್ಲ ಎಂದು ಶರ್ಮಾ ಅವರ ವಕೀಲರು ಸುಪ್ರೀಂಕೋರ್ಟ್‌ನಲ್ಲಿ ವಾದಿಸಿದ್ದಾರೆ.

ಆದಾಗ್ಯೂ, ನ್ಯಾಯಮೂರ್ತಿ ಆರ್. ಬಾನುಮತಿ, ಅಶೋಕ್ ಭೂಷಣ್ ಮತ್ತು ಎ.ಎಸ್. ಬೋಪಣ್ಣ ಅವರ ನ್ಯಾಯಪೀಠವು ನಾವು ಕ್ಷಮಾದಾನ ಅರ್ಜಿ ತಿರಸ್ಕರಿಸಿರುವ ಶಿಫಾರಸು ಪತ್ರವನ್ನು ಪರಿಶೀಲಿಸಿದ್ದು ಅದರಲ್ಲಿ ಲೆಫ್ಟಿನೆಂಟ್ ಗವರ್ನರ್ ಮತ್ತು ಗೃಹ ಸಚಿವರ ಸಹಿ ಇದೆ ಎಂದು ಹೇಳಿದೆ.

ಇದನ್ನೂ ಓದಿ:ನಿರ್ಭಯಾ:ವಿನಯ್‌ ಕುಮಾರ್‌ ಕ್ಷಮಾದಾನ ಅರ್ಜಿ ತಿರಸ್ಕರಿಸಿದ ರಾಷ್ಟ್ರಪತಿಗಳು

ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿ ತಿರಸ್ಕರಿಸಿರುವುದನ್ನು ಪ್ರಶ್ನಿಸಿ ವಿನಯ್ ಕುಮಾರ್ ಶರ್ಮಾ ಅವರ ಪರ ವಕೀಲ ಎ.ಪಿ.ಸಿಂಗ್ ಸುಪ್ರೀಂಕೋರ್ಟ್ ಮಂಗಳವಾರ ಅರ್ಜಿ ಸಲ್ಲಿಸಿದ್ದರು. ತರಾತುರಿಯಲ್ಲಿ ಕ್ಷಮಾದಾನ ಅರ್ಜಿ ತಿರಸ್ಕರಿಸಿದ್ದು ದುರುದ್ದೇಶದಿಂದ ಕೂಡಿದೆಮತ್ತು ಇದು ಸಂವಿಧಾನದ ಆಶಯವನ್ನು ಉಲ್ಲಂಘಿಸಿದೆ ಎಂದು ಸಿಂಗ್ ಆರೋಪಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT