ಭಾನುವಾರ, ಫೆಬ್ರವರಿ 23, 2020
19 °C

ನನ್ನ ಪೌರತ್ವ ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ : ಬಾಲಿವುಡ್ ನಟಿ ತಾಪ್ಸಿ ಪನ್ನು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಬಾಲಿವುಡ್ ನಟಿ ತಾಪ್ಸಿ ಪನ್ನು ದೆಹಲಿಯಲ್ಲಿ ಮತದಾನ ಮಾಡಿರುವುದಕ್ಕೆ ಆಕ್ಷೇಪಿಸಿದ ಟ್ವಿಟಿಗರ ವಿರುದ್ಧ ತಿರುಗಿಬಿದ್ದಿದ್ದಾರೆ.

ಅಲ್ಲದೆ, ನನ್ನ ಪೌರತ್ವ ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ ಎಂದಿದ್ದಾರೆ.

ವಿವರವೇನೆಂದರೆ, ನಟಿ ತಾಪ್ಸಿ ಪನ್ನು ಶನಿವಾರ ದೆಹಲಿಯಲ್ಲಿ ನಡೆಯುತ್ತಿರುವ ಮತದಾನಕ್ಕೆ ತೆರಳಿ ಕುಟುಂಬ ಸದಸ್ಯರ ಜೊತೆ ಮತದಾನ ಮಾಡಿದ ಫೋಟೋವನ್ನು ಟ್ವಿಟರ್‌‌ನಲ್ಲಿ ಪ್ರಕಟಿಸಿದ್ದರು. ಇದಕ್ಕೆ ಆಕ್ಷೇಪಿಸಿದ ಟ್ವಿಟಿಗರೊಬ್ಬರು ನಟಿ ತಾಪ್ಸಿ ಪನ್ನು ಇನ್ನೂ ಮುಂಬೈಗೆ ತಮ್ಮ ಹೆಸರನ್ನು ವರ್ಗಾಯಿಸಿಲ್ಲವೇ. ಅವರು ಕೆಲಸ ಮಾಡುತ್ತಿರುವುದು ಮುಂಬೈನಲ್ಲಿ ಅಲ್ಲವೆ, ಮತದಾವನ್ನು ದೆಹಲಿ ಮಾಡುತ್ತಿದ್ದಾರೆ ಎಂದು ಟ್ವೀಟ್ ಮಾಡಿಬಿಟ್ಟರು.

ಇಷ್ಟಕ್ಕೆ ಕೋಪಗೊಂಡ ತಾಪ್ಸಿ ಉದ್ದದ ಉತ್ತರವೊಂದನ್ನು ಟ್ವೀಟ್ ಮಾಡಿ, ನಾನು ದೆಹಲಿಯಲ್ಲಿಯೂ ವಾಸ ಮಾಡುತ್ತಿದ್ದೇನೆ. ಮುಂಬೈನಲ್ಲೂ ವಾಸಮಾಡುತ್ತೇನೆ. ನನ್ನ ಪೌರತ್ವವನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ. ನಾನು ದೆಹಲಿ ಮೂಲಕವೇ ತೆರಿಗೆ ಕಟ್ಟುತ್ತಿದ್ದೇನೆ. ದಯವಿಟ್ಟು ನನ್ನ ಪೌರತ್ವವನ್ನು ಪ್ರಶ್ನಿಸಬೇಡಿ. ನಿಮ್ಮ ಸಮಸ್ಯೆಗಳು ನಿಮಗೆ ಎಂದು ಖಾರವಾಗಿಯೇ ಉತ್ತರಿಸಿದ್ದಾರೆ.

 

ಅಲ್ಲದೆ, ನೀವು ದೆಹಲಿಯಿಂದ ಒಂದು ಹುಡುಗಿಯನ್ನು ಹೊರಗೆ ಕರೆದೊಯ್ಯಬಹುದು. ಆದರೆ, ಈ ಹುಡುಗಿಯಿಂದ ದೆಹಲಿಯನ್ನು ಹೊರಗಿಡಲು ಸಾಧ್ಯವಿಲ್ಲ. ನೀವು ಇದನ್ನು ಮಾಡು, ಇದನ್ನು ಮಾಡಬೇಡ ಎಂದು ಹೇಳಲು ಬರಬೇಡಿ. ಇಷ್ಟು ಪ್ರತಿಕ್ರಿಯೆ ಸಾಕೆನಿಸುತ್ತದೆ ಎಂದು ಹೇಳಿ ಇದರಿಂದ ನನಗೆ ಖುಷಿಯಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು