ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಶ್ಮೀರದಲ್ಲಿ ಆತಂಕ: ಸರ್ವ ಪಕ್ಷಗಳ ಸಭೆ ಕರೆದ ಮೆಹಬೂಬಾ ಮುಫ್ತಿ

ಏನಾಗುತ್ತಿದೆ ಇಲ್ಲಿ?
Last Updated 4 ಆಗಸ್ಟ್ 2019, 13:22 IST
ಅಕ್ಷರ ಗಾತ್ರ

ನವದೆಹಲಿ:ಜಮ್ಮು ಮತ್ತು ಕಾಶ್ಮೀರದಲ್ಲಿ ಎರಡು ವಾರಗಳ ಅಂತರದಲ್ಲಿ ನಿಯೋಜನೆಯಾಗಿರುವ 35,000 ಭದ್ರತಾ ಪಡೆ ಸಿಬ್ಬಂದಿ, ಸ್ಥಳೀಯರಲ್ಲಿ ಸೃಷ್ಟಿಯಾಗಿರುವ ಆತಂಕದ ವಿಚಾರವಾಗಿ ಚರ್ಚೆ ನಡೆಸಲು ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಭಾನುವಾರ ಸರ್ವಪಕ್ಷಗಳ ಸಭೆ ಕರೆದಿದ್ದಾರೆ.

ಸಂವಿಧಾನದ 370, 35(ಎ)ನೇ ಕಲಂ ಅಡಿಯಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿರುವ ವಿಶೇಷ ಸ್ಥಾನಮಾನವನ್ನು ಹಿಂಪಡೆಯುವ ಆತಂಕವನ್ನು ಸ್ಥಳೀಯ ರಾಜಕಾರಣಿಗಳು ವ್ಯಕ್ತಪಡಿಸುತ್ತಿದ್ದಾರೆ. ’ಸರ್ವಪಕ್ಷಗಳ ಸಭೆಯನ್ನು ಸ್ಥಳೀಯ ಹೋಟೆಲ್‌ವೊಂದರಲ್ಲಿ ನಡೆಸಲು ಉದ್ದೇಶಿಸಲಾಗಿತ್ತು. ಆದರೆ, ಯಾವುದೇ ಪಕ್ಷಗಳ ಸಭೆಗೆ ಅವಕಾಶ ನೀಡಬಾರದು ಎಂದುಪೊಲೀಸರು ಹೋಟೆಲ್‌ಗಳಿಗೆ ನೀಡಿರುವ ಸೂಚನೆಯಲ್ಲಿ ಪ್ರಸ್ತಾಪಿಸಿದ್ದಾರೆ. ನನ್ನ ಮನೆಯಲ್ಲಿಯೇ ಸಭೆ ಆಯೋಜಿಸಿದ್ದೇನೆ’ ಎಂದು ಮುಫ್ತಿ ಎಎನ್‌ಐಗೆ ಪ್ರತಿಕ್ರಿಯಿಸಿದ್ದರು.

(ನ್ಯಾಷನಲ್‌ ಕಾನ್ಫರೆನ್ಸ್‌ ಮುಖಂಡ ಫಾರೂಕ್‌ ಅಬ್ದುಲ್ಲಾ ಅವರ ನಿವಾಸದಲ್ಲಿ ಸರ್ವ ಪಕ್ಷಗಳ ಮುಖಂಡರು ಸಭೆ ಸೇರಿದ್ದಾರೆ)

‘ಯಾತ್ರಿಕರನ್ನು, ಪ್ರವಾಸಿಗರನ್ನು, ಕಾರ್ಮಿಕರನ್ನು, ವಿದ್ಯಾರ್ಥಿಗಳನ್ನು ಹಾಗೂ ಕ್ರಿಕೆಟಿಗರನ್ನು ಹೊರಗೆ ಕಳುಹಿಸಲಾಗಿದೆ. ಈ ಮೂಲಕ ಆತಂಕ ಮತ್ತು ಭಯದ ವಾತಾವರಣ ನಿರ್ಮಿಸಲಾಗಿದೆ. ಆದರೆ, ಕಾಶ್ಮೀರಿಗಳಿಗೆ ರಕ್ಷಣೆ ನೀಡುವ ಅಥವಾ ಭರವಸೆ ನೀಡುವ ಬಗೆಗೆ ಗಮನಹರಿಸಿಲ್ಲ...’ ಎಂದು ಟ್ವೀಟಿಸಿದ್ದಾರೆ.

ಭಾರತ ಸೇನೆ ಅಮರನಾಥ ಯಾತ್ರೆಯ ಮಾರ್ಗದಲ್ಲಿ ಅಡಗಿಸಿಡಲಾಗಿದ್ದಪಾಕಿಸ್ತಾನ ಸೇನೆಗೆ ಸೇರಿದ ಸ್ಫೋಟಕಗಳು ಹಾಗೂ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡ ನಂತರದಲ್ಲಿ ಯಾತ್ರಿಕರನ್ನು ಕಾಶ್ಮೀರದಿಂದ ಮರಳುವಂತೆ ಸರ್ಕಾರ ಸೂಚನೆ ಹೊರಡಿಸಿತ್ತು. ವಿದ್ಯಾರ್ಥಿಗಳು, ಪ್ರವಾಸಿಗರು ಕಾಶ್ಮೀರದಿಂದ ತರಾತುರಿಯಲ್ಲಿ ತೆರಳು ಮುಂದಾದರು. ಸ್ಥಳೀಯರು ಸಾಧ್ಯವಾದಷ್ಟು ಆಹಾರ ಮತ್ತು ಇತರೆ ಅಗತ್ಯ ವಸ್ತುಗಳನ್ನು ಸಂಗ್ರಹಿಸಿಕೊಳ್ಳಲು ಮುಗಿಬಿದ್ದರು. ಉಗ್ರರ ಸಂಭಾವ್ಯ ದಾಳಿಯ ಬಗ್ಗೆ ಗುಪ್ತಚರ ಮಾಹಿತಿ ಹೊರಬಂದಿತು, ಭದ್ರತಾ ಪಡೆಗಳು ಗಡಿ ಭಾಗಗಳಲ್ಲಿ ಭದ್ರತೆ ಬಿಗಿಗೊಳಿಸಿದವು,...ಈ ಎಲ್ಲ ಬೆಳವಣಿಗೆಗಳು ’ಏನಾಗುತ್ತಿದೆ ಕಾಶ್ಮೀರದಲ್ಲಿ?’ ಎಂಬ ಪ್ರಶ್ನೆಯನ್ನು ಹಾಗೆಯೇ ಉಳಿಸಿದೆ.

ಇವನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT