ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರುಚಿ, ವಾಸನೆ ಗ್ರಹಿಕೆ ಶಕ್ತಿ ನಷ್ಟವೂ ಕೋವಿಡ್‌ ರೋಗಲಕ್ಷಣ’

Last Updated 12 ಜೂನ್ 2020, 11:33 IST
ಅಕ್ಷರ ಗಾತ್ರ

ನವದೆಹಲಿ:ಹಠಾತ್ತನೆ ರುಚಿ ಹಾಗೂ ವಾಸನೆ ಗ್ರಹಿಸುವ ಶಕ್ತಿ ಕಳೆದುಕೊಳ್ಳುವುದನ್ನು ಕೋವಿಡ್‌–19 ರೋಗಲಕ್ಷಣಗಳೆಂದು ಪರಿಗಣಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.

ಕೋವಿಡ್‌– 19 ಕುರಿತ ರಾಷ್ಟ್ರೀಯ ಕಾರ್ಯಪಡೆ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಲಾಗಿದ್ದು, ಇನ್ನು ಒಮ್ಮತ ಅಭಿಪ್ರಾಯಕ್ಕೆ ಬಂದಿಲ್ಲ ಎಂದು ಮೂಲಗಳು ಶುಕ್ರವಾರ ತಿಳಿಸಿವೆ.

ರುಚಿ ಮತ್ತು ವಾಸನೆ ಗ್ರಹಿಸುವ ಶಕ್ತಿ ಕಳೆದುಕೊಳ್ಳುವುದನ್ನು ಹಲವು ರೋಗಿಗಳು ವ್ಯಕ್ತಪಡಿಸುತ್ತಿರುವುದು ವರದಿಯಾಗಿದ್ದು, ಈ ಅಂಶವನ್ನು ರೋಗಲಕ್ಷಣಗಳ ಪಟ್ಟಿಯಲ್ಲಿ ಸೇರಿಸುವುದು ಒಳ್ಳೆಯದೆಂದು ಕಾರ್ಯಪಡೆಯ ಕೆಲವು ಸದಸ್ಯರು ಅಭಿಪ್ರಾಯಪಟ್ಟಿದ್ದಾರೆ.

ಕೋವಿಡ್‌–19ನ ಲಕ್ಷಣಗಳು ನಿರ್ದಿಷ್ಟವಾಗಿಲ್ಲದಿದ್ದರೂ ಕೆಲವರಿಗೆ ಜ್ವರ ಕಾಣಿಸಿಕೊಂಡರೆ, ಕೆಲವರು ವಾಸನೆ ಮತ್ತು ರುಚಿಯನಷ್ಟದಿಂದ ಬಳಲುಬಹುದುತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕೋವಿಡ್‌ ರೋಗಲಕ್ಷಣಗಳ ಪಟ್ಟಿಯಲ್ಲಿ ರುಚಿ ಮತ್ತು ಆಘ್ರಾಣ ಶಕ್ತಿ ಕಳೆದುಕೊಳ್ಳುವುದನ್ನು ಅಮೆರಿಕದ ರೋಗ ತಡೆ ಮತ್ತು ನಿಯಂತ್ರಣ ಕೇಂದ್ರವು ಕಳೆದ ತಿಂಗಳಲ್ಲಿ ಸೇರಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT