ಗುರುವಾರ , ಫೆಬ್ರವರಿ 20, 2020
29 °C
ಸಿಎಎ ಕಾಯ್ದೆ ಕುರಿತು ದೆಹಲಿ ಮಾಜಿ ಲೆಫ್ಟಿನೆಂಟ್ ಗೌರ್ನರ್ ನಜೀಬ್ ಜಂಗ್ ಹೇಳಿಕೆ

ಮುಸ್ಲಿಮರನ್ನು ಸೇರಿಸಿ, ಇಲ್ಲವೇ ಇತರರನ್ನು ಕೈಬಿಡಿ: ನಜೀಬ್ ಜಂಗ್

ಏಜೆನ್ಸಿಸ್ Updated:

ಅಕ್ಷರ ಗಾತ್ರ : | |

ನವದೆಹಲಿ: ಪೌರತ್ವ (ತಿದ್ದುಪಡಿ)ಕಾಯ್ದೆಯಲ್ಲಿ ಮುಸ್ಲಿಮರನ್ನು ಸೇರಿಸಿ, ಇಲ್ಲವೇ ಇತರರನ್ನು ಕೈಬಿಡಿ ಎಂದು ದೆಹಲಿಯ ಮಾಜಿ ಲೆಫ್ಟಿನೆಂಟ್ ಗೌರ್ನರ್ ನಜೀಬ್ ಜಂಗ್ ಒತ್ತಾಯಿಸಿದ್ದಾರೆ.

ಎಷ್ಟು ದಿನಗಳು ಈ ರೀತಿ ಪ್ರತಿಭಟನೆಗಳನ್ನು ಎದುರಿಸುತ್ತೀರಿ, ದೆಹಲಿಯಲ್ಲಿ ಬಸ್ಸುಗಳ ಓಡಾಟವಿಲ್ಲ, ಅಂಗಡಿ ಮುಂಗಟ್ಟು ತೆರೆಯುತ್ತಿಲ್ಲ, ನಷ್ಟದ ಪ್ರಮಾಣ ಹೆಚ್ಚುತ್ತಿದೆ, ವ್ಯಾಪಾರ ವಹಿವಾಟು ಇಲ್ಲವಾಗಿದೆ, ಆರ್ಥಿಕ ಸ್ಥಿತಿ ದಿನದಿಂದ ದಿನಕ್ಕೆ ತಳಮಟ್ಟಕ್ಕೆ ಹೋಗುತ್ತಿದೆ. ಪ್ರತಿಭಟನಾಕಾರರ ಜೊತೆ ಮಾತುಕತೆ ನಡೆಸದೆ ಈಗಿನ ಸಮಸ್ಯೆಗೆ ಯಾವುದೇ ಪರಿಹಾರವಿಲ್ಲ ಎಂದು ಅವರು ಹೇಳಿದ್ದಾರೆ.

ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಆವರಣದಲ್ಲಿ ಮಾತನಾಡಿದ ಅವರು, ಪೌರತ್ವ (ತಿದ್ದುಪಡಿ) ಕಾಯ್ದೆ ಸಮಗ್ರ ಬದಲಾವಣೆಯಾಗಬೇಕಿದೆ. ಪ್ರಧಾನಿ ನರೇಂದ್ರಮೋದಿ ಅವರು ಪ್ರತಿಭಟನಾಕಾರರನ್ನು ಮಾತುಕತೆಗೆ ಆಹ್ವಾನಿಸಿ ಸಮಸ್ಯೆ ಪರಿಹರಿಸಬೇಕು ಎಂದು ನಜೀಬ್ ಒತ್ತಾಯಿಸಿದ್ದಾರೆ.

 

ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ಬಂದಾಗಿನಿಂದಲೂ ದೆಹಲಿ ಸೇರಿದಂತೆ ರಾಷ್ಟ್ರದ ಹಲವೆಡೆ ದಿನನಿತ್ಯ ಪ್ರತಿಭಟನೆ ನಡೆಯುತ್ತಿದೆ. ಕೆಲವು ಕಡೆ ಪೊಲೀಸರು ಗುಂಡಿಗೆ ಪ್ರತಿಭಟನಾಕಾರರು ಬಲಿಯಾಗಿದ್ದಾರೆ. ಹಲವರು ಲಾಠಿಯಿಂದ ತೀವ್ರಗಾಯಗೊಂಡಿರುವ ಪ್ರಕರಣಗಳೂ ನಡೆದಿವೆ. 

ಇದನ್ನೂ ಓದಿ: ದೆಹಲಿ: ಹಿಂಸೆಗೆ ತಿರುಗಿದ ಪೌರತ್ವ ಕಾಯ್ದೆ ವಿರೋಧಿ ಪ್ರತಿಭಟನೆ,3 ಬಸ್ಸಿಗೆ ಬೆಂಕಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು