ಉತ್ತರ ಪ್ರದೇಶದಲ್ಲಿ ರೈಲ್ವೆ ಪೊಲೀಸರಿಂದ ಪತ್ರಕರ್ತನ ಮೇಲೆ ಮೂತ್ರ ವಿಸರ್ಜನೆ

ಬುಧವಾರ, ಜೂನ್ 26, 2019
29 °C

ಉತ್ತರ ಪ್ರದೇಶದಲ್ಲಿ ರೈಲ್ವೆ ಪೊಲೀಸರಿಂದ ಪತ್ರಕರ್ತನ ಮೇಲೆ ಮೂತ್ರ ವಿಸರ್ಜನೆ

Published:
Updated:

ಶಾಮ್ಲಿ: ಉತ್ತರ ಪ್ರದೇಶದಲ್ಲಿ ನ್ಯೂಸ್‌ 24 ಸುದ್ದಿ ವಾಹಿನಿಯ ವರದಿಗಾರನಿಗೆ ರೈಲ್ವೆ ಪೊಲೀಸರು ಥಳಿಸಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. 

ಉತ್ತರ ಪ್ರದೇಶದಲ್ಲಿ ಪತ್ರಕರ್ತರ ಮೇಲಿನ ದಾಳಿ ಪ್ರಕರಣಗಳು ಹೆಚ್ಚುತ್ತಿದ್ದು ಮಂಗಳವಾರ ರಾತ್ರಿ ನ್ಯೂಸ್‌ 24 ಸುದ್ದಿ ವಾಹಿನಿಯ ವರದಿಗಾರ ಅಮಿತ್ ಶರ್ಮಾ ಮೇಲೆ ರೈಲ್ವೆ ಪೊಲೀಸರು ದಾಳಿ ನಡೆಸಿ ಗಂಭೀರವಾಗಿ ಹಲ್ಲೆ ಮಾಡಿದ್ದಾರೆ. 

ಈ ಬಗ್ಗೆ ಅಮಿತ್‌ ಶರ್ಮಾ ಪೊಲೀಸರಿಗೆ ದೂರು ನೀಡಿದ್ದಾರೆ. ಶಾಮ್ಲಿಯಲ್ಲಿ ಗೂಡ್ಸ್‌ ರೈಲು ಹಳಿ ತಪ್ಪಿತ್ತು, ಈ ವೇಳೆ ಸ್ವಳದಲ್ಲಿ ವರದಿಗಾರಿಕೆ ಮಾಡುವುದನ್ನು ರೈಲ್ವೆ ಪೊಲೀಸರು ತಡೆದರು. ರೈಲಿನ ಚಿತ್ರಿಕರಣಕ್ಕೂ ಅವಕಾಶ ಕೊಡದೆ ನಮ್ಮ ಬಳಿ ಇದ್ದ ಕ್ಯಾಮೆರಾ ಮತ್ತು ಮೊಬೈಲ್‌ ಫೋನ್‌ಗಳನ್ನು ಕಸಿದುಕೊಂಡರು.

ಈ ದೌರ್ಜನ್ಯವನ್ನು ಖಂಡಿಸಿದ್ದಕ್ಕೆ ನನ್ನ ಮೇಲೆ ದಾಳಿ ಮಾಡಿ ಬಲವಂತವಾಗಿ ಮೂತ್ರ ಕುಡಿಸಿದರು ಎಂದು ಅಮಿತ್ ಶರ್ಮಾ ದೂರಿನಲ್ಲಿ ತಿಳಿಸಿದ್ದಾರೆ. 

ಸಮವಸ್ತ್ರ ಧರಿಸಿಲ್ಲದ ಕೆಲ ರೈಲ್ವೆ ಪೊಲೀಸರು ನಮ್ಮ ಮೇಲೆ ದಾಳಿ ನಡೆಸಿದ್ದಾರೆ ಎಂದು ಅಮಿತ್ ಶರ್ಮಾ ಹೇಳಿದ್ದಾರೆ. 

ಪತ್ರಕರ್ತರ ಪ್ರತಿಭಟನೆ: ಅಮಿತ್ ಶರ್ಮಾ ಮೇಲಿನ ದಾಳಿ ಖಂಡಿಸಿ ನೂರಾರು ಪತ್ರಕರ್ತರು ಶಾಮ್ಲಿ ಜಿಲ್ಲಾ ಪೊಲೀಸ್‌ ಠಾಣೆ ಎದುರು ಪ್ರತಿಭಟನೆ ನಡೆಸಿದ್ದು ತಪ್ಪಿತಸ್ಥ ರೈಲ್ವೆ ಪೊಲೀಸರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. 

ಅಮಾನತು: ಅಮಿತ್ ಶರ್ಮಾ ಮೇಲೆ ದಾಳಿ ಮಾಡಿರುವ ಮೂವರು ರೈಲ್ವೆ  ಪೊಲೀಸರನ್ನು ಅಮಾನತು ಮಾಡಲಾಗಿದೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ. ಅಮಿತ್ ಶರ್ಮಾ ಮೇಲಿನ ದಾಳಿಯ ವಿಡಿಯೊವನ್ನು ಪರಿಶೀಲಿಸಿ, ಘಟನಾ ಸ್ಥಳದಲ್ಲಿದ್ದ ರೈಲ್ವೆ ಪೊಲೀಸರನ್ನು ಅಮಾನತು ಮಾಡಲಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ. 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 2

  Sad
 • 0

  Frustrated
 • 6

  Angry

Comments:

0 comments

Write the first review for this !