ದೀಪಾವಳಿಗೂ ಮುನ್ನವೇ ದೆಹಲಿಯನ್ನು ಆವರಿಸಿದ ದಟ್ಟ ಹೊಗೆ–ಮಂಜು

ನವದೆಹಲಿ: ದೀಪಾವಳಿಗೂ ಮುನ್ನವೇ ದೆಹಲಿಯಲ್ಲಿ ಹೊಗೆ ಮಿಶ್ರಿತ ದಟ್ಟ ಮಂಜು ಆವರಿಸಿದ್ದು, ವಾಯು ಗುಣಮಟ್ಟ ಅಪಾಯಕಾರಿ ಮಟ್ಟವನ್ನು ಮೀರಿದೆ. ಇದು ಉಸಿರಾಟಕ್ಕೆ ಸಂಬಂಧಿಸಿದ ತೊಂದರೆಗಳಿಗೆ ಕಾರಣವಾಗಲಿದೆ ಎನ್ನಲಾಗಿದೆ.
ದೆಹಲಿ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾಹಿತಿ ಪ್ರಕಾರ, ಸೋಮವಾರ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) ಒಂದು ಘನ ಮೀಟರ್ ಗಾಳಿಯಲ್ಲಿ 2.5 ಮೈಕ್ರಾನ್ ಗಾತ್ರದ ಮಾಲಿನ್ಯಕಾರಕ ಕಣಗಳ ಪ್ರಮಾಣ 644 ಅಥವಾ ವಿಶ್ವ ಆರೋಗ್ಯ ಸಂಸ್ಥೆ ನೀಡಿರುವ ಅಪಾಯಕಾರಿ ಮಟ್ಟಕ್ಕಿಂತಲೂ 20 ಪಟ್ಟು ಹೆಚ್ಚಿದೆ. ಪಿಎಂ 2.5 ಮಾಲಿನ್ಯಕಾರಕ ಕಣಗಳು ನೇರವಾಗಿ ಶ್ವಾಸಕೋಶವನ್ನು ತಲುಪಿ ಉಸಿರಾಟದ ಸಮಸ್ಯೆಗಳನ್ನು ತಂದೊಡುತ್ತದೆ.
#Delhi's Mandir Marg at 707, Major Dhyan Chand National Stadium at 676 & Jawaharlal Nehru stadium at 681 under 'Hazardous' category in Air Quality Index pic.twitter.com/ZXTCZdFmRt
— ANI (@ANI) November 5, 2018
ನವೆಂಬರ್ 10ರ ವರೆಗೂ ಮಾಲಿನ್ಯಕಾರಕ ವಾಹನಗಳ ತಪಾಸಣೆ ನಡೆಸುವಂತೆ ಸಂಚಾರಿ ಪೊಲೀಸರಿಗೆ ದೆಹಲಿ ಮಾಲಿನ್ಯ ನಿಯಂತ್ರಣ ಮಂಡಳಿ ಸೂಚಿಸಿದೆ. ಭೂಮಿ ತೋಡುವುದು ಸೇರಿದಂತೆ ಧೂಳು ಇಮ್ಮಡಿಸುವ ಕಟ್ಟಡ ನಿರ್ಮಾಣ ಕಾರ್ಯಗಳನ್ನು ನಡೆಸುವಂತಿಲ್ಲ; ಕಲ್ಲು ಪುಡಿ ಮಾಡುವ ಯಂತ್ರಗಳ ಬಳಕೆಗೂ ನಿಷೇಧ ಹೇರಲಾಗಿದೆ.
ಹೆಚ್ಚಿದ ಗಾಳಿಯ ವೇಗ ಹಾಗೂ ಮಾಲಿನ್ಯ ನಿಯಂತ್ರಣ ಕ್ರಮಗಳ ಪರಿಣಾಮ ಭಾನುವಾರ ಗಾಳಿಯ ಗುಣಮಟ್ಟ ಉತ್ತಮಗೊಂಡಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.