ಅಭ್ಯರ್ಥಿಗಳ ಪಟ್ಟಿ: ಟಿಎಂಸಿಯಲ್ಲಿ ಶೇ 41ರಷ್ಟು ಟಿಕೆಟ್‌ಗಳು ಮಹಿಳೆಯರಿಗೆ– ಮಮತಾ

ಮಂಗಳವಾರ, ಮಾರ್ಚ್ 19, 2019
21 °C

ಅಭ್ಯರ್ಥಿಗಳ ಪಟ್ಟಿ: ಟಿಎಂಸಿಯಲ್ಲಿ ಶೇ 41ರಷ್ಟು ಟಿಕೆಟ್‌ಗಳು ಮಹಿಳೆಯರಿಗೆ– ಮಮತಾ

Published:
Updated:

ಕೋಲ್ಕತ್ತ: ಪಶ್ಚಿಮ ಬಂಗಾಳದ ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ತೃಣಮೂಲ ಕಾಂಗ್ರೆಸ್ (ಟಿಎಂಸಿ) ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಪಕ್ಷವು ಶೇ 41ರಷ್ಟು ಕ್ಷೇತ್ರಗಳಲ್ಲಿ ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಿದೆ.

ಇಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಮುಖ್ಯಸ್ಥೆ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪಕ್ಷದ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದರು.

ರಾಜ್ಯದಲ್ಲಿರುವ ಎಲ್ಲಾ 42 ಸ್ಥಾನಗಳಿಗೂ ಪಕ್ಷವು ಅಭ್ಯರ್ಥಿಗಳನ್ನು ಘೋಷಿಸಿದೆ. 42ರಲ್ಲಿ 17 ಸ್ಥಾನಗಳಲ್ಲಿ ಮಹಿಳೆಯರಿಗೆ ಸ್ಥಾನ ನೀಡಲಾಗಿದೆ. ಈಗ ಇರುವ ಹಾಲಿ ಸಂಸದರಲ್ಲಿ 10 ಮಂದಿಗೆ ಟಿಕೆಟ್ ನೀಡಿಲ್ಲ.

ಈ ಬಾರಿ ಟಿಕೆಟ್ ಪಡೆದವರಲ್ಲಿ ಟಿ.ವಿ. ಮತ್ತು ಸಿನಿಮಾ ತಾರೆಯರು, ಕ್ರೀಡಾಪಟುಗಳು ಸೇರಿ ಖ್ಯಾತನಾಮರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ಪಕ್ಷವು ಒಡಿಶಾ, ಅಸ್ಸಾಂ, ಜಾರ್ಖಂಡ್, ಬಿಹಾರ ಮತ್ತು ಅಂಡಮಾನ್‌ಗಳಲ್ಲಿ ಸ್ಪರ್ಧಿಡಸಲಿದೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 8

  Happy
 • 1

  Amused
 • 0

  Sad
 • 0

  Frustrated
 • 4

  Angry

Comments:

0 comments

Write the first review for this !