ಬುಧವಾರ, ಫೆಬ್ರವರಿ 19, 2020
21 °C

ರೈಲಿನಲ್ಲಿ ಪತ್ನಿಗಾಗಿ ಸೀಟು ಕೇಳಿದ ವ್ಯಕ್ತಿಯ ಕೊಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪುಣೆ: ರೈಲಿನಲ್ಲಿ ಪತ್ನಿಗೆ ಕುಳಿತುಕೊಳ್ಳಲು ಸೀಟು ಕೇಳಿದ ವ್ಯಕ್ತಿಯೊಬ್ಬರನ್ನು ಸಹ ಪ್ರಯಾಣಿಕರು ಹೊಡೆದು ಸಾಯಿಸಿದ ಘಟನೆ ಮುಂಬೈ –ಲಾತೂರ್–ಬೀದರ್ ಎಕ್ಸ್‌ಪ್ರೆಸ್‌ ರೈಲಿನಲ್ಲಿ ನಡೆದಿದೆ.

ಮೃತರನ್ನು ಮುಂಬೈ ನಿವಾಸಿ ಸಾಗರ್ ಮಾರ್ಕಂಡೆ ಎಂದು ಗುರುತಿಸಲಾಗಿದ್ದು  ಸಾಗರ್‌ ತನ್ನ ಪತ್ನಿ ಜ್ಯೋತಿ ಮತ್ತು 2 ವರ್ಷದ ಮಗಳೊಂದಿಗೆ ಸೋಲಾಪುರಕ್ಕೆ ತೆರಳಲು ಬುಧವಾರ ರಾತ್ರಿ ರೈಲು ಹತ್ತಿದ್ದರು.  

ಸಾಮಾನ್ಯ (ಜನರಲ್) ಭೋಗಿಯ ಸೀಟ್‌ಗಳು ತುಂಬಿದ್ದವು, ತನ್ನ ಪತ್ನಿ ಮತ್ತು ಮಗಳಿಗೆ ಕುಳಿತುಕೊಳ್ಳಲು ಸ್ಥಳಾವಕಾಶ ನೀಡುವಂತೆ ಸಾಗರ್ ಮಾರ್ಕಂಡೆ ಸಹ ಪ್ರಯಾಣಿಕರಲ್ಲಿ ಕೇಳಿಕೊಂಡಿದ್ದರು.

ಈ ಸಂಬಂಧ ಸಹ ಪ್ರಯಾಣಿಕರ ಜತೆಯಲ್ಲಿ ಮಾತಿನ ಚಕಮಕಿ ನಡೆದಿದ್ದು 12 ಜನರ ಗುಂಪು ಅವರ ಮೇಲೆ ಹಲ್ಲೆ ನಡೆಸಿದೆ. ಈ ವೇಳೆ ಪತ್ನಿಯು ದಾಳಿಕೋರರಲ್ಲಿ ತನ್ನ ಪತಿಯನ್ನು ಬಿಡುವಂತೆ ವಿನಂತಿಸಿಕೊಂಡರೂ ಯಾವುದೇ ಪ್ರಯೋಜನವಾಗಲಿಲ್ಲ. ಮುಂದಿನ ನಿಲ್ದಾಣ ಬರುವವರೆಗೂ ಅವರ ಮೇಲೆ ಹಲ್ಲೆ ನಡೆಸಲಾಗಿದೆ.

ರೈಲ್ವೆ ಪೊಲೀಸರು ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರೂ ಚಿಕಿತ್ಸೆ ಫಲಕಾರಿಯಾಗದೆ ಸಾಗರ್ ಮಾರ್ಕಂಡೆ ಮೃತಪಟ್ಟಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಮಹಿಳೆಯರು, 4 ಪುರುಷರನ್ನು ಬಂಧಿಸಲಾಗಿದ್ದು ಉಳಿದ ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು