ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಡಿಪಿ ಹೇಳಿಕೆಗೆ ಟ್ರೋಲ್ | ಸಾಮಾಜಿಕ ಮಾಧ್ಯಮಗಳನ್ನು ನಿಷೇಧಿಸಿ: ನಿಶಿಕಾಂತ್ ದುಬೆ

Last Updated 4 ಡಿಸೆಂಬರ್ 2019, 7:01 IST
ಅಕ್ಷರ ಗಾತ್ರ

ನವದೆಹಲಿ: ಜಿಡಿಪಿಯು ಮುಂದಿನ ದಿನಗಳಲ್ಲಿ ಅಪ್ರಸ್ತುತವಾಗುತ್ತದೆ ಎಂದು ಲೋಕಸಭೆಯಲ್ಲಿ ಹೇಳಿದ್ದ ಬಿಜೆಪಿ ಸಂಸದ ಶಶಿಕಾಂತ್ ದುಬೆಯ ಹೇಳಿಕೆಯನ್ನು ಟ್ರೋಲ್ ಮಾಡಲಾಗಿತ್ತು. ಈಬೆನ್ನಲ್ಲೇ ಸಾಮಾಜಿಕ ಮಾಧ್ಯಮಗಳಲ್ಲಿ ಸಂಸತ್ ಸದಸ್ಯರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡುವುದನ್ನು ತಡೆಯುವ ಕಾನೂನುಗಳನ್ನು ರೂಪಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಅಲ್ಲದೆ ತಮ್ಮ ವಿರುದ್ಧ ವೈಯಕ್ತಿಕ ದಾಳಿ ನಡೆಸಿದ್ದಾರೆ ಎಂದಿರುವ ಅವರು, ನನ್ನನ್ನು ಮತ್ತು ನಮ್ಮ ಸದನದ ಇತರೆ ಸದಸ್ಯರನ್ನು ರಕ್ಷಿಸುವಂತೆ ಸ್ಪೀಕರ್ ಓಂ ಬಿರ್ಲಾ ಅವರನ್ನು ಕೇಳಿಕೊಂಡಿದ್ದಾರೆ.

'ನಾನು ನಿಮ್ಮಿಂದ ರಕ್ಷಣೆಯನ್ನು ಬಯಸುತ್ತಿದ್ದೇನೆ. ಸಂವಿಧಾನದ ವಿಧಿ 105 ಮತ್ತು 105 (2)ರಲ್ಲಿ ಹೇಳಿರುವಂತೆ ಸದನದಲ್ಲಿ ಯಾವುದೇ ವಿಚಾರದ ಕುರಿತು ಚರ್ಚಿಸಿದಾಗ ಅದನ್ನು ಇದ್ದಂತೆಯೇ ವರದಿ ಮಾಡಬೇಕು ಮತ್ತು ಯಾವುದೇ ಸದಸ್ಯರು ಯಾವುದೇ ಭಯ ಮತ್ತು ಪಕ್ಷಪಾತವಿಲ್ಲದೆ ತನ್ನ ವಿಚಾರವನ್ನು ಹೇಳಲು ಮುಕ್ತವಾಗಿರಬೇಕು. 105 ನೇ ವಿಧಿಯನ್ನು ರಚಿಸಿದಾಗ ಸಾಮಾಜಿಕ ಮಾಧ್ಯಮಗಳು ಮತ್ತು ಬ್ರೇಕಿಂಗ್ ನ್ಯೂಸ್ ಇರಲಿಲ್ಲ' ಎಂದು ಸಂಸತ್ತಿನಲ್ಲಿ ಹೇಳಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.

'ಈ ರೀತಿಯ ಚಟುವಟಿಕೆಗಳನ್ನು ನಿಲ್ಲಿಸಲು ಸಾಮಾಜಿಕ ಮಾಧ್ಯಮವನ್ನು ನಿಷೇಧಿಸಲು ಅಗತ್ಯ ಕಾನೂನು ರೂಪಿಸಬೇಕು ಎಂದು ನಾನು ನಿಮ್ಮ(ಲೋಕಸಭಾ ಸ್ಪೀಕರ್) ಮೂಲಕ ವೈಯಕ್ತಿಕವಾಗಿ ಸರ್ಕಾರವನ್ನು ಒತ್ತಾಯಿಸುತ್ತೇನೆ' ಎಂದು ಅವರು ಹೇಳಿದರು.

ಸಂಸತ್ತಿನಲ್ಲಿ ತನ್ನ ಹೇಳಿಕೆ ಕುರಿತು ವಿವರಿಸಿದ ದುಬೆ, ಜಿಡಿಪಿ ಪರಿಕಲ್ಪನೆಯು ಸರಿ ಕಾಣಿಸುತ್ತಿಲ್ಲ ಎಂದು 1934ರಲ್ಲಿ ಆರ್ಥಿಕ ಶಾಸ್ತ್ರಜ್ಞ ಸೈಮನ್ ಕುಜ್ನೆಟ್ ಹೇಳಿದ್ದರು. ಇಡೀ ವಿಶ್ವದಾದ್ಯಂತ ಇದೇ ವಿಚಾರವಾಗಿ ಚರ್ಚೆಗಳು ನಡೆಯುತ್ತಿವೆ.

ಫ್ರೆಂಚ್ ಅಧ್ಯಕ್ಷ ನಿಕೋಲಸ್ ಸರ್ಕೋಜಿ ರಚಿಸಿದ ಅಮರ್ತ್ಯ ಸೇನ್, ಪ್ರೊ. ಜೋಸೆಫ್ ಕೈತ್ ಮತ್ತು ಚಿನ್ ಪೌಲ್ ಅವರಿದ್ದ ಸಮಿತಿಯ ವರದಿಯೊಂದಿಗೆ ಬಂದಿದ್ದೆ. ಅವರೆಲ್ಲರೂ ಕೂಡ ತಮ್ಮ 1934ರಲ್ಲಿ ಸೈಮನ್ ಕುಜ್ನೆಟ್ ಹೇಳಿದ್ದನ್ನೇ ತಮ್ಮ ವರದಿಯಲ್ಲಿ ಹೇಳಿದ್ದರು ಎಂದು ಸಮರ್ಥಿಸಿಕೊಂಡಿದ್ದಾರೆ.

ನಾನು ತರ್ಕ ಮತ್ತು ಪುರಾವೆಗಳನ್ನುಇಟ್ಟುಕೊಂಡೇ ಆ ರೀತಿಯಾಗಿ ಸಂಸತ್ತಿನಲ್ಲಿ ಮಾತನಾಡಿದ್ದೆ ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್‌ಗೆ ಗುರಿಯಾಗಿದ್ದೇನೆಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT