ಭಾನುವಾರ, ಅಕ್ಟೋಬರ್ 20, 2019
27 °C

ತೆಲಂಗಾಣ ಸಾರಿಗೆ ಮುಷ್ಕರ: ಆತ್ಮಹತ್ಯೆಗೆ ಯತ್ನಿಸಿದ ಚಾಲಕ

Published:
Updated:

ಹೈದರಾಬಾದ್‌: ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರ ಮುಂದುವರಿದಿದ್ದು, ಸರ್ಕಾರ ಯಾವುದೇ ಸಂಧಾನಕ್ಕೆ ಮುಂದಾಗಿಲ್ಲ. ಈ ನಡುವೆ ಖಮ್ಮಮ್‌ ಜಿಲ್ಲೆಯಲ್ಲಿ ಚಾಲಕರೊಬ್ಬರು ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಶೇ 80 ರಷ್ಟು ದೇಹ ಸುಟ್ಟಿದ್ದು, ಗಂಭೀರ ಸ್ಥಿತಿಯಲ್ಲಿರುವ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ರಾಮಚಂದ್ರಾ‍ಪುರಂ ಗ್ರಾಮದ ಶ್ರೀನಿವಾಸ ರೆಡ್ಡಿ ಆತ್ಮಹತ್ಯೆಗೆ ಯತ್ನಿಸಿದವರು. ಖಮ್ಮಮ್‌ ಡಿಪೊದಲ್ಲಿ ಇವರು ಕೆಲಸ ಮಾಡುತ್ತಿದ್ದರು. ಮುಷ್ಕರ ನಿರತ ನೌಕರರ ಜತೆ ಸಂಧಾನ ನಡೆಸುವುದಿಲ್ಲ ಎಂದು ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರು ಘೋಷಣೆ ಮಾಡಿದ ಸುದ್ದಿ ಕೇಳಿ ಆಘಾತಗೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ರೆಡ್ಡಿ ಅವರ ಸಹೋದ್ಯೋಗಿಗಳು ತಿಳಿಸಿದ್ದಾರೆ.
 
ನೌಕರರ ಯೂನಿಯನ್‌ ಇದೇ 19 ರಂದು ರಾಜ್ಯವ್ಯಾಪಿ ಬಂದ್‌ಗೆ ಕರೆ ನೀಡಿದೆ. ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿ ಇದೇ 5 ರಿಂದ ಮುಷ್ಕರ ನಡೆಸುತ್ತಿದೆ.
Post Comments (+)