ಗುರುವಾರ , ಡಿಸೆಂಬರ್ 3, 2020
19 °C

ಪಿಎಚ್‌.ಡಿ ಪ್ರಬಂಧ ಕೃತಿಚೌರ್ಯ ತಡೆಗೆ ಹೊಸ ತಂತ್ರಾಂಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರಕಾಶ ಜಾವಡೇಕರ್

ಮುಂಬೈ : ‘ಪಿಎಚ್‌.ಡಿ ಪ್ರಬಂಧಗಳ ಕೃತಿಚೌರ್ಯಕ್ಕೆ ಕಡಿವಾಣ ಹಾಕುವ ಸಲುವಾಗಿ ‘ಟರ್ನ್‌ಇಟ್‌ಇನ್‌’ ತಂತ್ರಾಂಶದ ನೆರವು ಪಡೆಯಲು ನಿರ್ಧರಿಸಲಾಗಿದೆ’ ಎಂದು ಮಾನವ ಸಂಪನ್ಮೂಲ ಅಭಿವೃದ್ದಿ ಸಚಿವ ಪ್ರಕಾಶ್ ಜಾವಡೇಕರ್‌ ಹೇಳಿದ್ದಾರೆ.

ಶಿರಡಿಯ ಸಾಯಿಬಾಬಾ ದೇವಸ್ಥಾನಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕೃತಿಚೌರ್ಯ ಮಾಡಿದ ಪ್ರಬಂಧ ಸಲ್ಲಿಕೆಯಾಗಿರುವುದು ಪತ್ತೆಯಾದರೆ ಅಂಥ ವ್ಯಕ್ತಿಗೆ ಡಾಕ್ಟರೇಟ್‌ ಪದವಿ ನೀಡಲಾಗುವುದಿಲ್ಲ’ ಎಂದರು.

‘ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಪಿಎಚ್‌.ಡಿಗಾಗಿ ಸಲ್ಲಿಸುವ ಪ್ರಬಂಧಗಳು ಕೃತಿಚೌರ್ಯದ ಮೂಲಕ ಸಿದ್ಧಪಡಿಸುತ್ತಿರುವುದು ಕಂಡು ಬಂದಿದೆ. ಒಬ್ಬರು ಸಲ್ಲಿಸಿದ ಪ್ರಬಂಧವನ್ನು ತಪ್ಪಾಗಿ ಮತ್ತೊಬ್ಬರು ಬಳಸುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಇಂತಹ ಬೆಳವಣಿಗೆಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು