ರಿವಾಲ್ವರ್‌ ಹಿಡಿದು ನೃತ್ಯ ಮಾಡಿದ ಬಿಜೆಪಿ ಶಾಸಕ– ವಿಡಿಯೊ ವೈರಲ್‌

ಶುಕ್ರವಾರ, ಜೂಲೈ 19, 2019
26 °C

ರಿವಾಲ್ವರ್‌ ಹಿಡಿದು ನೃತ್ಯ ಮಾಡಿದ ಬಿಜೆಪಿ ಶಾಸಕ– ವಿಡಿಯೊ ವೈರಲ್‌

Published:
Updated:
Prajavani

ಡೆಹ್ರಾಡೂನ್‌: ಅಮಾನತುಗೊಂಡಿರುವ ಬಿಜೆಪಿ ಶಾಸಕ ಕುನ್ವರ್‌ ಪ್ರಣವ್‌ ಸಿಂಗ್‌ ಚಾಂಪಿಯನ್‌ ರಿವಾಲ್ವರ್‌ ಹಿಡಿದುಕೊಂಡು ನೃತ್ಯ ಮಾಡುತ್ತಿರುವ ವಿಡಿಯೊ ವೈರಲ್‌ ಆಗಿದ್ದು, ಮತ್ತೊಂದು ಸಮಸ್ಯೆಗೆ ಸಿಲುಕಿದ್ದಾರೆ.

ಉತ್ತರಾಖಂಡದ ಕಾನ್ಪುರ ಕ್ಷೇತ್ರದ ಶಾಸಕ ಸಿಂಗ್‌ ಅವರು, ಬಾಲಿವುಡ್‌ ಚಿತ್ರದ ಹಾಡಿಗೆ ಎರಡು ರಿವಾಲ್ವರ್‌ ಹಿಡಿದುಕೊಂಡು ನೃತ್ಯ ಮಾಡುತ್ತಿರುವುದು ವಿಡಿಯೊದಲ್ಲಿದೆ. ಜತೆಗೆ ಈತನ ಸ್ನೇಹಿತರು ಹುರಿದುಂಬಿಸುವುದು ಮತ್ತು ಈತನಿಗೆ ಪಾನೀಯ ನೀಡುವುದು ವಿಡಿಯೊದಲ್ಲಿದೆ.

ಈ ಶಾಸಕರಿಗೆ ವಿವಾದವೇನೂ ಹೊಸದಲ್ಲ. ನವದೆಹಲಿಯ ಉತ್ತರಾಖಂಡ ನಿವಾಸದಲ್ಲಿ ಪತ್ರಕರ್ತರೊಬ್ಬರಿಗೆ ಬೆದರಿಕೆ ಹಾಕಿದ ಆರೋಪ ಇವರ ಮೇಲಿದೆ. ಇಂಥ ಅಶಿಸ್ತಿನ ವರ್ತನೆಗೆ ಮೂರು ತಿಂಗಳ ಅವಧಿಗೆ ಇವರನ್ನು ಬಿಜೆಪಿ ಕಳೆದ ತಿಂಗಳು ಅಮಾನತು ಮಾಡಿದೆ. ಎರಡು ತಿಂಗಳ ಹಿಂದೆ ಬಿಜೆಪಿಯ ಶಾಸಕ ಝಬ್ರೆಡಾ ದೇಶರಾಜ್‌ ಕಾರ್ನಾವಾಲ್‌ ಜತೆಗೆ ಬಹಿರಂಗವಾಗಿಯೇ ಜಗಳವಾಡಿದ್ದರು.

ಷೋಕಾಸ್‌ ನೋಟಿಸ್‌ ಜಾರಿ: ‘ಶಾಸಕ ಸಿಂಗ್‌ ಅವರ ವರ್ತನೆ ಪಕ್ಷಕ್ಕೆ ಮುಜುಗುರ ಉಂಟು ಮಾಡಿದ್ದು, ಅವರಿಗೆ ಷೋಕಾಸ್‌ ನೋಟಿಸ್‌ ನೀಡಿ ವಿವರಣೆ ಕೇಳಲಾಗಿದೆ. ವಿವರಣೆ ತೃಪ್ತಿದಾಯಕವಾಗದಿದ್ದರೆ, ಅವರನ್ನು ಪಕ್ಷದಿಂದ ಉಚ್ಚಾಟಿಸುವ ಸಾಧ್ಯತೆ ಇದೆ‘ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಅಜಯ್‌ ಭಟ್‌ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !