ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾರ್ಲೆ ಡೇವಿಡ್ಸನ್‌ ಬೈಕ್‌ ಮೇಲಿನ ಸುಂಕ ಕಡಿತಕ್ಕೆ ಮನವಿ

Last Updated 25 ಫೆಬ್ರುವರಿ 2020, 19:47 IST
ಅಕ್ಷರ ಗಾತ್ರ

ನವದೆಹಲಿ: ಹಾರ್ಲೆ ಡೇವಿಡ್ಸನ್‌ ಬೈಕ್‌ನ ಕೆಲವು ಮಾದರಿಗಳಿಗೆ ವಿಧಿಸುತ್ತಿರುವ ಆಮದು ಸುಂಕವನ್ನು ಕಡಿಮೆ ಮಾಡುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಭಾರತಕ್ಕೆ ಮನವಿ ಮಾಡಿದ್ದಾರೆ.

ಭಾರತದ ಉದ್ಯಮಿಗಳ ಜೊತೆ ನಡೆಸಿದ ಸಂವಾದ ಕಾರ್ಯಕ್ರಮದಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ‘ಪೌಲ್ಟ್ರಿ ಮತ್ತು ಹೈನು ಉತ್ಪನ್ನಗಳಿಗೂ ಸೂಕ್ತ ಮಾರುಕಟ್ಟೆ ಒದಗಿಸುವ ಅವಶ್ಯಕತೆಯನ್ನು ಪುನರುಚ್ಚರಿಸಿದರು.

ಬೈಕ್‌ನ ಕೆಲವು ಮಾದರಿಗಳಿಗೆ ಭಾರತವು ಶೇ 100ರಷ್ಟು ಸುಂಕ ವಿಧಿಸುತ್ತಿತ್ತು. ಕಳೆದ ವರ್ಷ ಟ್ರಂಪ್‌ ಮನವಿ ಮೇರೆಗೆ ಸುಂಕದ ಪ್ರಮಾಣವನ್ನು ಶೇ 50ರಷ್ಟು ಕಡಿತಗೊಳಿಸಲಾಗಿದೆ.

ಹೂಡಿಕೆಗೆ ಆಹ್ವಾನ: ಅಮೆರಿಕದಲ್ಲಿ ಬಂಡವಾಳ ಹೂಡುವಂತೆ ಭಾರತದ ಉದ್ಯಮಿಗಳಲ್ಲಿ ಮನವಿ ಮಾಡಿದ ಟ್ರಂಪ್‌, ಹೂಡಿಕೆಗೆ ಪೂರಕವಾಗುವ ರೀತಿಯಲ್ಲಿ ನಿಯಮಗಳನ್ನು ಸರಳಗೊಳಿಸಲಾಗುವುದು ಎಂದು ಭರವಸೆ ನೀಡಿದರು.

ದೇಶದ ಪ್ರತಿಷ್ಠಿತ ಉದ್ಯಮ ಸಮೂಹಗಳ ಗಣ್ಯರೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ನೀವು ಹೂಡುವ ಬಂಡವಾಳ ಸಾಕಷ್ಟು ಉದ್ಯೋಗಗಳನ್ನು ಸೃಷ್ಟಿಸುವ ಮೂಲಕ ಅಮೆರಿಕದ ಆರ್ಥಿಕತೆಯನ್ನು ಇನ್ನಷ್ಟೂ ಬಲಪಡಿಸಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT