ನವದೆಹಲಿ: ಕೋವಿಡ್-19 ಹಿನ್ನೆಲೆಯಲ್ಲಿ ವಿದೇಶದಲ್ಲಿ ಉಳಿದಿರುವ ಭಾರತೀಯರನ್ನು ತವರಿಗೆ ಕರೆತರಲು ವಂದೇ ಭಾರತ್ ಮಿಷನ್‌ನ ಮೂರನೇ ಹಂತದ ಕಾರ್ಯಾಚರಣೆ ಗುರುವಾರ ಆರಂಭವಾಗಿದೆ.

ವಂದೇ ಭಾರತ್ ಮಿಷನ್‌ನ ಮೊದಲೆರಡು ಹಂತಗಳಲ್ಲಿ 1,65,000ಕ್ಕೂ ಅಧಿಕ ಜನರನ್ನು ಭಾರತಕ್ಕೆ ಮರಳಿ ಕರೆತರಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಜುಲೈ 2ರವರೆಗೆ ಮೂರನೇ ಹಂತದ ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿದೆ. ಒಟ್ಟು 432 ಅಂತರರಾಷ್ಟ್ರೀಯ ವಿಮಾನಗಳು, 43 ದೇಶಗಳಲ್ಲಿ ಉಳಿದುಕೊಂಡಿರುವ ಭಾರತೀಯರನ್ನು ಕರೆತರಲಿವೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ತಿಳಿಸಿದ್ದಾರೆ.

ಇಂಡಿ-ಗೊದಿಂದ 24 ಮತ್ತು ಗೊ-ಏರ್ ಸಂಸ್ಥೆಯಿಂದ ಮೂರು ವಿಮಾನ ಸೇರಿದಂತೆ ಒಟ್ಟು 29 ಖಾಸಗಿ ವಿಮಾನಗಳು ಮೂರನೇ ಹಂತದಲ್ಲಿ ಕಾರ್ಯನಿರ್ವಹಿಸಲಿವೆ ಎಂದು ಅವರು ಹೇಳಿದ್ದಾರೆ.

ಭಾರಿ ಬೇಡಿಕೆ ಇರುವ ಹಿನ್ನೆಲೆಯಲ್ಲಿ ಅಮೆರಿಕ ಮತ್ತು ಕೆನಡಾ ದೇಶಗಳಿಗೆ ವಿಮಾನಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ ಎಂದು ಶ್ರೀವಾಸ್ತವ ತಿಳಿಸಿದ್ದಾರೆ.

ಅಮೆರಿಕದಿಂದ 53 ಮತ್ತು ಕೆನಡಾದಿಂದ 24 ವಿಮಾನಗಳು ಬರಲಿವೆ. ಪ್ಯಾರಿಸ್ ಮತ್ತು ಫ್ರಾಂಕ್‌ಫರ್ಟ್‌ನಿಂದ ತಲಾ 16 ವಿಮಾನಗಳು ಅಲ್ಲಿ ಉಳಿದಿರುವ ಭಾರತೀಯರನ್ನು ಮರಳಿ ಕರೆತರಲಿವೆ. ಜಿಸಿಸಿ (ಕೊಲ್ಲಿ ಸಹಕಾರ ಮಂಡಳಿ) ದೇಶಗಳಿಂದ 170 ವಿಮಾನಗಳು ಭಾರತಕ್ಕೆ ಬಂದಿಳಿಯಲಿವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.