ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಂದೇ ಭಾರತ್ ಮಿಷನ್: ಯುಎಇಯಿಂದ ಕೇರಳಕ್ಕೆ 363 ಮಂದಿ ಭಾರತೀಯರ ಆಗಮನ

Last Updated 11 ಮೇ 2020, 1:36 IST
ಅಕ್ಷರ ಗಾತ್ರ

ಕೋಯಿಕ್ಕೋಡ್:ಕೋವಿಡ್-19 ಲಾಕ್‌ಡೌನ್‌ನಿಂದಾಗಿ ಸಂಯುಕ್ತ ಅರಬ್ ರಾಷ್ಟ್ರದಲ್ಲಿ ಸಿಕ್ಕಿಹಾಕಿಕೊಂಡಿದ್ದ ಭಾರತೀಯರನ್ನು ತಾಯ್ನಾಡಿಗೆ ಕರೆತಂದಿರುವಮೊದಲ ವಿಮಾನ ಗುರುವಾರ ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದೆ.

ನಾಲ್ಕು ಮಕ್ಕಳು ಮತ್ತು 177 ಪ್ರಯಾಣಿಕರನ್ನು ಭಾರತಕ್ಕೆ ಕರೆತಂದಿರುವ ಅಬುದಾಬಿಯಿಂದ ಹೊರಟ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ರಾತ್ರಿ 10.20ಕ್ಕೆ ಕೊಚ್ಚಿ ತಲುಪಿದ ಕೆಲವೇ ನಿಮಿಷಗಳಲ್ಲಿ 177 ಪ್ರಯಾಣಿಕರು ಮತ್ತು 5 ಮಕ್ಕಳನ್ನು ಕರೆತಂದ ಇನ್ನೊಂದು ವಿಮಾನ ಕೋಯಿಕ್ಕೋಡ್ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದೆ.

ವಿದೇಶದಲ್ಲಿ ಸಿಲುಕಿರುವ ಭಾರತೀಯರನ್ನು ತಾಯ್ನಾಡಿಗೆ ಕರೆತರುವ 'ವಂದೇ ಭಾರತ್ ಮಿಷನ್‌'ನ ಮೊದಲ ಹಂತದಲ್ಲಿ ಕೊಲ್ಲಿ ರಾಷ್ಟ್ರದಲ್ಲಿರುವ ಜನರನ್ನು ಸುರಕ್ಷಿತವಾಗಿ ಕರೆತರಲಾಗಿದೆ.ವಂದೇ ಭಾರತ್ ಮಿಷನ್‌ ಪ್ರಕಾರ 64 ವಿಮಾನಮತ್ತು ಮೂರು ಹಡಗುಗಳಲ್ಲಿ ವಿದೇಶಲ್ಲಿರುವ 15,000 ಭಾರತೀಯರನ್ನು ಕರೆತರಲಾಗುವುದು.

ಗುರುವಾರ ಕೊಚ್ಚಿ ಮತ್ತು ಕೋಯಿಕ್ಕೋಡ್ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಪ್ರಯಾಣಿಕರನ್ನು ಪ್ರವೇಶ ದ್ವಾರದಲ್ಲಿ ಸ್ವಾಗತಿಸಿದ್ದುಅಧಿಕಾರಿಗಳು ಮತ್ತು ಆರೋಗ್ಯ ಕಾರ್ಯಕರ್ತರು. ಪಿಪಿಇ ಧರಿಸಿದ ಆರೋಗ್ಯ ಕಾರ್ಯಕರ್ತರು ಪ್ರಯಾಣಿಕರು ಬಂದಿಳಿಯುತ್ತಿದ್ದಂತೆ ಕೈಗೆ ಸ್ಯಾನಿಟೈಜರ್ ನೀಡಿ,ತಂಡಗಳನ್ನಾಗಿ ವಿಂಗಡಿಸಿ ಆರೋಗ್ಯ ತಪಾಸಣೆಗೆ ಕಳಿಸಿಕೊಟ್ಟಿದ್ದಾರೆ.

ರೋಗ ಲಕ್ಷಣಗಳಿರುವವರನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗುವುದು. ಅದೇ ವೇಳೆ ರೋಗ ಲಕ್ಷಣ ಇಲ್ಲದೇ ಇದ್ದವರು ಅವರವರ ಜಿಲ್ಲೆಯಲ್ಲಿರುವ ಕ್ವಾರಂಟೈನ್ ಕೇಂದ್ರಗಳಲ್ಲಿ 14 ದಿನ ಕಳೆಯಬೇಕು. ಗರ್ಭಿಣಿಯರು, ಹಿರಿಯ ನಾಗರಿಕರು, 10 ವರ್ಷದ ಕೆಳಗಿನ ಮಕ್ಕಳು ಅವರವರ ಮನೆಯಲ್ಲಿಯೇ ಕ್ವಾರಂಟೈನ್‌ನಲ್ಲಿರಿಸಲು ಸೂಚಿಸಲಾಗಿದೆ. ಮೊದಲೆರಡು ವಿಮಾನದಲ್ಲಿ 60 ಗರ್ಭಿಣಿಯರು ಪ್ರಯಾಣಿಸಿದ್ದಾರೆ.

ಲಗೇಜುಗಳಿಗೆ ಸೋಂಕು ನಿವಾರಕ ಸಿಂಪಡಿಸಿ, ಅಲ್ಟ್ರಾವೈಲೆಟ್ ಕಿರಣಗಳನ್ನು ಹಾಯಿಸಿ ಸೋಂಕು ಮುಕ್ತ ಮಾಡಿದ ನಂತರವೇ ಪ್ರಯಾಣಿಕರಿಗೆ ನೀಡಲಾಗಿದೆ. ಅಲ್ಟ್ರಾವೈಲೆಟ್ ಕಿರಣಗಳನ್ನು ಹಾಯಿಸಿ ಸೋಂಕು ನಿವಾರಣೆ ಮಾಡುವ ವ್ಯವಸ್ಥೆಯನ್ನು ಡಿಆರ್‌ಡಿಒ ತಯಾರಿಸಿದ್ದು ಇತ್ತೀಚೆಗೆ ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಅದನ್ನು ಸ್ಥಾಪಿಸಲಾಗಿದೆ.

ಲಗೇಜುಗಳು ಸಿಕ್ಕಿದ ನಂತರ ಪ್ರಯಾಣಿಕರನ್ನುವಿಶೇಷ ಬಸ್ ಮೂಲಕ ಕ್ವಾರಂಟೈನ್ ಕೇಂದ್ರಗಳಿಗೆ ಕರೆದೊಯ್ಯಲಾಗಿದೆ.

ಕೇರಳದಲ್ಲಿ ಕೋವಿಡ್ ರೋಗ ಸ್ಥಿತಿಗತಿಗಳ ಬಗ್ಗೆ ಗುರುವಾರ ಮಾಹಿತಿ ನೀಡಿದ ಆರೋಗ್ಯ ಸಚಿವೆ ಕೆ.ಕೆ ಶೈಲಜಾ ರಾಜ್ಯದಲ್ಲಿ 25 ಕೋವಿಡ್ ರೋಗ ಪ್ರಕರಣಗಳು ಇವೆ. ಕಣ್ಣೂರಿನ ಮೂವರು ಮತ್ತು ಕಾಸರಗೋಡಿನ ಇಬ್ಬರು ರೋಗ ಮುಕ್ತರಾಗಿದ್ದಾರೆ ಎಂದು ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT