ಗುರುವಾರ , ಏಪ್ರಿಲ್ 15, 2021
26 °C

ಬಿಜೆಪಿಯ ನಕರಾತ್ಮಕ ರಾಜಕೀಯದ ವಿರುದ್ಧ ಸಿಕ್ಕಿದ ಗೆಲುವು: ಸೋನಿಯಾ ಗಾಂಧಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಹಿಂದಿ ಪ್ರಾಬಲ್ಯವಿರುವ ರಾಜ್ಯಗಳಾದ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸಗಡದಲ್ಲಿ ಕಾಂಗ್ರೆಸ್ ಗೆಲುವಿಗೆ ಸೋನಿಯಾ ಗಾಂಧಿ ಹರ್ಷ ವ್ಯಕ್ತ ಪಡಿಸಿದ್ದಾರೆ.

ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಖುಷಿತಂದಿದೆ. ಇದು ಬಿಜೆಪಿಯ ನಕಾರಾತ್ಮಕ  ರಾಜಕೀಯದ ವಿರುದ್ಧ ಸಿಕ್ಕಿದ ಗೆಲುವು ಎಂದು ಸೋನಿಯಾ ಹೇಳಿದ್ದಾರೆ. 

2014ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‍ನ್ನು ಪರಾಭವಗೊಳಿಸಿ ಮೋದಿ ನೇತೃತ್ವದ ಎನ್‍ಡಿಎ ಅಧಿಕಾರಕ್ಕೇರಿತ್ತು. ಈ ಸೋಲಿನಿಂದ ಮುಜುಗರ ಅನುಭವಿಸಿದ್ದ ಕಾಂಗ್ರೆಸ್‍ಗೆ ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಹುರುಪು ತುಂಬಿದೆ.

ಡಿ.11, 2017ರಂದು ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷರಾಗಿದ್ದು, ಒಂದು ವರ್ಷ ಕಳೆದ ಮೇಲೆ ಅದೇ ದಿನ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿರುವುದು ಕಾಂಗ್ರೆಸ್ ಪಾಳಯದಲ್ಲಿ ಖುಷಿ ತಂದಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು