'ಐಶ್ವರ್ಯಾ ರೈ ಮೀಮ್' ಬಳಸಿ ಮತಗಟ್ಟೆ ಸಮೀಕ್ಷೆ ಬಗ್ಗೆ ಟ್ವೀಟಿಸಿದ ವಿವೇಕ್ ಒಬೆರಾಯ್

ಸೋಮವಾರ, ಜೂನ್ 17, 2019
28 °C

'ಐಶ್ವರ್ಯಾ ರೈ ಮೀಮ್' ಬಳಸಿ ಮತಗಟ್ಟೆ ಸಮೀಕ್ಷೆ ಬಗ್ಗೆ ಟ್ವೀಟಿಸಿದ ವಿವೇಕ್ ಒಬೆರಾಯ್

Published:
Updated:

ಮುಂಬೈ: ಬಾಲಿವುಡ್ ನಟ ವಿವೇಕ್ ಒಬೆರಾಯ್ ಮತಗಟ್ಟೆ ಸಮೀಕ್ಷೆ ಬಗ್ಗೆ ಮೀಮ್‌ವೊಂದನ್ನು ಶೇರ್ ಮಾಡಿ ನೆಟ್ಟಿಗರಿಂದ ಟೀಕೆಗೊಳಗಾಗಿದ್ದಾರೆ.

ಮತಗಟ್ಟೆ ಸಮೀಕ್ಷೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೇರಲಿದೆ ಎಂದು ಹೇಳಿವೆ. ಮತಗಟ್ಟೆ ಸಮೀಕ್ಷೆಗಳ ಬಗ್ಗೆ ಹಲವಾರು ಮೀಮ್ ಟ್ರೋಲ್‌ಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.

ಈ ನಡುವೆ ವಿವೇಕ್ ಒಬೆರಾಯ್ ಮೀಮ್ ಒಂದನ್ನು ಶೇರ್ ಮಾಡಿದ್ದು, ಈ ಮೀಮ್‌ ಬಗ್ಗೆ ನೆಟಿಜನ್‌ಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಮೀಮ್‌ನಲ್ಲಿ ಏನಿದೆ? 
ಬಾಲಿವುಡ್ ನಟಿ ಐಶ್ವರ್ಯಾ ರೈ ಅವರ ವೈಯಕ್ತಿಕ ಜೀವನವನ್ನು ನಗೆಯಾಡುವ ಮೀಮ್ ಇದಾಗಿದೆ. ಒಪೀನಿಯನ್ ಪೋಲ್ ಎಂದು ಬರೆದು ಅಲ್ಲಿ ಐಶ್ವರ್ಯಾ ಸಲ್ಮಾನ್ ಖಾನ್ ಫೋಟೊ ಇದೆ. ಅದರ ಕೆಳಗೆ ಎಕ್ಸಿಟ್ ಪೋಲ್ ಎಂದು ಬರೆದು ವಿವೇಕ್ ಒಬೆರಾಯ್ ಮತ್ತು ಐಶ್ವರ್ಯಾ ಫೋಟೊ ಇದೆ. ಆಮೇಲೆ ರಿಸಲ್ಟ್ ಎಂದು ಬರೆದು ಐಶ್ವರ್ಯಾ ರೈ ಪತಿ ಅಭಿಷೇಕ್ ಬಚ್ಚನ್ ಮಗಳು ಆರಾಧ್ಯ ಜತೆಗಿರುವ ಫೋಟೊ ಇದೆ.  ಈ ಮೀಮ್ ಶೇರ್  ಮಾಡಿದ ವಿವೇಕ್ ಇದರಲ್ಲಿ ರಾಜಕೀಯ ಇಲ್ಲ, ಜೀವನ  ಮಾತ್ರ ಎಂದು ಟ್ವೀಟಿಸಿದ್ದರು.

ಮಹಿಳಾ ಆಯೋಗದಿಂದ ನೋಟಿಸ್

ಐಶ್ವರ್ಯಾ ರೈ ವಿರುದ್ಧದ ಅವಹೇಳನಕಾರಿ ಪೋಸ್ಟ್‌ ಹಂಚಿಕೊಂಡಿರುವ ವಿವೇಕ್‌ ಒಬೆರಾಯ್‌ಗೆ ರಾಷ್ಟ್ರೀಯ ಮಹಿಳಾ ಆಯೋಗ ಸೋಮವಾರ ನೋಟಿಸ್‌ ನೀಡಿದೆ. 

‘ವಿವೇಕ್‌ ಕೃತ್ಯ ಗಂಭೀರ ಮತ್ತು ಅನೈತಿಕವಾದುದು. ಸಾರ್ವಜನಿಕವಾಗಿ ಮಹಿಳೆಯ ಘನತೆಗೆ ಕುಂದು ತರುವ ಕೆಲಸವನ್ನು ವಿವೇಕ್‌ ಮಾಡಿದ್ದಾರೆ’ ಎಂದು ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ನೋಟಿಸ್‌ನಲ್ಲಿ ಹೇಳಿದ್ದಾರೆ. 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 3

  Happy
 • 5

  Amused
 • 1

  Sad
 • 4

  Frustrated
 • 3

  Angry

Comments:

0 comments

Write the first review for this !