ಗುರುವಾರ , ಫೆಬ್ರವರಿ 25, 2021
25 °C

Photos| ವಿಶಾಖಪಟ್ಟಣ ಅನಿಲ ದುರಂತದ ತೀವ್ರತೆ ವಿವರಿಸುವ ಚಿತ್ರಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಂಧ್ರಪ್ರದೇಶದ ವಿಶಾಖಪಟ್ಟಣಂನ ವೆಂಕಟಾಪುರದಲ್ಲಿರುವ ಎಲ್‌ಜಿ ಪಾಲಿಮರ್ಸ್‌ ಎಂಬ ಕಾರ್ಖಾನೆಯಲ್ಲಿ ಇಂದು ಮುಂಜಾನೆ ವಿಷಾನಿಲ  ಸೋರಿಕೆಯಾಗಿದೆ.  ಕ್ಷಣಾರ್ಧದಲ್ಲಿ ಅನಿಲವು ಸುತ್ತಲ ಪ್ರದೇಶ ವ್ಯಾಪಿಸಿದ್ದು ಈ ವರೆಗೆ 7 ಮಂದಿ ಮೃತಪಟ್ಟಿದ್ದಾರೆ. 800ಕ್ಕೂ ಅಧಿಕ ಮಂದಿ ಅಸ್ವಸ್ಥಗೊಂಡಿದ್ದು ಎಲ್ಲರನ್ನು ಅಲ್ಲಿನ ಕಿಂಗ್‌ ಜಾರ್ಜ್ ಆಸ್ಪತ್ರೆಗೆ ದಾಖಲಿಸಲಾಗಿದೆ.  ಉಸಿರಾಟದ ಸಮಸ್ಯೆಯಿಂದಾಗಿ ಜನ ಬೀದಿ ಬೀದಿಗಳಲ್ಲಿ ಕುಸಿದು ಬೀಳುತ್ತಿದ್ದ, ಅಸ್ವಸ್ಥರನ್ನು ಹೊತ್ತು ಆಸ್ಪ‍ತ್ರೆಗೆ ಓಡುತ್ತಿದ್ದ ದೃಶ್ಯಗಳು ಅಲ್ಲಿ ಸಾಮಾನ್ಯ ಎಂಬಂತೆ ಕಂಡಿವೆ. ವಿಶಾಖಪಟ್ಟಣದ ಈ ದುರಂತ ಭೋಪಾಲದ ಅನಿಲ ದುರಂತವನ್ನು ನೆನಪಿಸಿದೆ. 

 


ಅಸ್ವಸ್ಥಗೊಂಡವರನ್ನು ಆಸ್ಪತ್ರೆಗೆ ಸಾಗಿಸುತ್ತಿರುವುದು -ಪಿಟಿಐ ಚಿತ್ರಗಳು

 

 


ಪ್ರಜ್ಞಾಹೀನ ಸ್ಥಿತಿಯಲ್ಲಿರುವ ಮಹಿಳೆ

  


ಆಂಬುಲೆನ್ಸ್‌ನಲ್ಲಿ ಮಕ್ಕಳನ್ನು ಆಸ್ಪತ್ರೆಗೆ ರವಾನಿಸಲಾಯಿತು

 

 


ಅಸ್ವಸ್ಥಗೊಂಡವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು