ಗುರುವಾರ , ಏಪ್ರಿಲ್ 2, 2020
19 °C

ಮಹಾ ಜನರ ಬೆನ್ನಿಗೆ ಚೂರಿ ಹಾಕಿದ  ಅಜಿತ್‌ ಪವಾರ್‌: ಸಂಜಯ್‌ ರಾವುತ್‌ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ:  ನ್ಯಾಷನಲಿಸ್ಟ್‌ ಕಾಂಗ್ರೆಸ್‌ ಪಕ್ಷ (ಎನ್‌ಸಿಪಿ)ದ ಮುಖಂಡ ಅಜಿತ್‌ ಪವಾರ್‌ ಮಹಾರಾಷ್ಟ್ರದ ಜನರ ಬೆನ್ನಿಗೆ ಚೂರಿ ಹಾಕಿದ್ದಾರೆ ಎಂದು ಶಿವಸೇನಾ ಮುಖಂಡ ಸಂಜಯ್‌ ರಾವುತ್‌ ಶನಿವಾರ ಹೇಳಿದ್ದಾರೆ.

ಮಹಾಷ್ಟ್ರದಲ್ಲಿ ಬಿಜೆಪಿ ಮತ್ತು ಎನ್‌ಸಿಪಿ ಮೈತ್ರಿ ಸರ್ಕಾರ ರಚನೆಯಾಗಿದ್ದು ಮುಖ್ಯಮಂತ್ರಿಯಾಗಿ ದೇವೇಂದ್ರ ಫಡಣವೀಸ್‌ ಹಾಗೂ ಉಪ ಮುಖ್ಯಮಂತ್ರಿಯಾಗಿ ಅಜಿತ್ ಪವಾರ್‌ ಶನಿವಾರ ಬೆಳಗ್ಗೆ  ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. 

ನಿನ್ನೆ ನಡೆದ ಸಭೆಯಲ್ಲಿ ಅಜಿತ್‌ ಪವಾರ್‌ ಭಾಗವಹಿಸಿದ್ದರು ನಂತರ ವಕೀಲರ ಜೊತೆ ಮಾತನಾಡಬೇಕು ಎಂದು ಮಧ್ಯದಲ್ಲೆ ಹೋದರು, ಅವರ ನಡವಳಿಕೆಯೂ ವಿಚಿತ್ರವಾಗಿತ್ತು. ಅವರಿಗೆ ಫೋನ್‌ ಮಾಡಿದಾಗ ಸ್ವೀಚ್‌ ಆಫ್‌ ಬರುತ್ತಿತ್ತು. ನಮಗೆ  ಈಗ ತಿಳಿಯಿತು ಅವರು ಯಾವ ವಕೀಲರನ್ನು ನೋಡಲು ಹೋಗಿದ್ದರು ಎಂದು. ಅಜಿತ್‌ ಪವಾರ್‌ ಮಹಾರಾಷ್ಟ್ರ ಜನರ ಬೆನ್ನಿಗೆ ಚೂರಿ ಹಾಕಿದ್ದಾರೆ ಎಂದು ಸಂಜಯ್‌ ರಾವುತ್‌ ಕಿಡಿಕಾರಿದ್ದಾರೆ. 

ಬಿಜೆಪಿಗೆ ಬೆಂಬಲ ನೀಡಿರುವುದು ಅಜಿತ್‌ ಪವಾರ್‌ ಅವರ ವೈಯಕ್ತಿಕ ವಿಚಾರ, ಎನ್‌ಸಿಪಿ ಇದನ್ನು ಬೆಂಬಲಿಸುವುದಿಲ್ಲ ಎಂದು ಶರದ್‌ ಪವಾರ್‌ ಹೇಳಿದ್ದಾರೆ. 

ಕೇಂದ್ರ ಸರ್ಕಾರ ಐಟಿ, ಇಡಿಯನ್ನು ತೋರಿಸಿ ಅಜಿತ್‌ ಪವಾರ್‌ ಅವರನ್ನು ಬೆದರಿಸಿ ಎನ್‌ಸಿಪಿಯನ್ನು ಇಬ್ಬಾಗ ಮಾಡಿದೆ ಎಂದು ಶಿವಸೇನಾ ಬಿಜೆಪಿ ವಿರುದ್ಧ ಆರೋಪಿಸಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು