ರಾಜಕೀಯ ಸಿದ್ಧಾಂತ ಆಧರಿಸಿ ಯಾವುದೇ ನಿರ್ಧಾರ ಕೈಗೊಳ್ಳುವುದಿಲ್ಲ: ಟ್ವಿಟರ್ ವಾಗ್ದಾನ

7
ನಿಷ್ಪಕ್ಷಪಾತ ನಿಲುವು

ರಾಜಕೀಯ ಸಿದ್ಧಾಂತ ಆಧರಿಸಿ ಯಾವುದೇ ನಿರ್ಧಾರ ಕೈಗೊಳ್ಳುವುದಿಲ್ಲ: ಟ್ವಿಟರ್ ವಾಗ್ದಾನ

Published:
Updated:

ನವದೆಹಲಿ: ಸದಾ ನಿಷ್ಪಕ್ಷಪಾತ ಧೋರಣೆ ಹೊಂದಿರುವುದಾಗಿ ಟ್ವಿಟರ್ ಸಂಸ್ಥೆ ಸ್ಪಷ್ಟಪಡಿಸಿದೆ. ತನ್ನ ನೀತಿಗಳು ರಾಜಕೀಯ ಸಿದ್ಧಾಂತಗಳನ್ನು ಆಧರಿಸಿಲ್ಲ ಎಂದು ಅದು ತಿಳಿಸಿದೆ. 

ರಾಜಕೀಯ ಸಿದ್ಧಾಂತಗಳನ್ನು ಆಧರಿಸಿ ತನ್ನ ವೇದಿಕೆಯಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳುತ್ತಿಲ್ಲ. ಯಾವ ವಿಷಯಕ್ಕೂ ರಾಜಕೀಯದ ಲೇಪ ಹಚ್ಚುವುದಿಲ್ಲ ಎಂದು ತಿಳಿಸಿದೆ.

ಕೆಲವು ವಾರಗಳಿಂದ ಟ್ವಿಟರ್ ಮತ್ತು ರಾಜಕೀಯ ಪಕ್ಷಪಾತದ ಬಗ್ಗೆ ಭಾರತದಲ್ಲಿ ಭಾರಿ ಚರ್ಚೆ ನಡೆಯುತ್ತಿರುವುದನ್ನು ಪ್ರಸ್ತಾಪಿಸಿರುವ ಸಂಸ್ಥೆ, ನೇರವಂತಿಕೆ ಪ್ರದರ್ಶಿಸುತ್ತಿರುವುದಾಗಿ ಹೇಳಿದೆ. ಮುಕ್ತತೆ, ಪಾರದರ್ಶಕತೆ ಹಾಗೂ ತಾರತಮ್ಯರಹಿತ ನೀತಿಗಳನ್ನು ಪಾಲನೆ ಮಾಡುತ್ತಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ. 

ಸಾಮಾಜಿಕ ಜಾಲತಾಣಗಳಲ್ಲಿ ನಾಗರಿಕ ಹಕ್ಕುಗಳ ಸಂರಕ್ಷಣೆ ವಿಷಯದ ಕುರಿತು  ಫೆಬ್ರುವರಿ 11ರಂದು ಹಾಜರಾಗಿ ವಿವರಣೆ ನೀಡುವಂತೆ ಮಾಹಿತಿ ತಂತ್ರಜ್ಞಾನ ಸಂಸದೀಯ ಸ್ಥಾಯಿಸಮಿತಿಯು ಟ್ವಿಟರ್‌ಗೆ ಸೂಚಿಸಿರುವ ಹಿನ್ನೆಲೆಯಲ್ಲಿ ಸಂಸ್ಥೆ ಈ ಸ್ಪಷ್ಟನೆ ನೀಡಿದೆ. 

ಅನಪೇಕ್ಷಿತ ವಿಧಾನದ ಮೂಲಕ ದೇಶದ ಚುನಾವಣಾ ಪ್ರಕ್ರಿಯೆ ಮೇಲೆ ಪ್ರಭಾವ ಬೀರಲು ಯತ್ನಿಸಿದರೆ ಕಠಿಣ ಕ್ರಮ ಜರುಗಿಸುವುದಾಗಿ ಸಾಮಾಜಿಕ ಜಾಲತಾಣಗಳಿಗೆ ಇತ್ತೀಚೆಗೆ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿತ್ತು.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !