ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯದೊಂದಿಗೆ ಧರ್ಮವನ್ನು ಬೆರೆಸಿದ್ದು ಶಿವಸೇನಾದ ತಪ್ಪು: ಉದ್ಧವ್ ಠಾಕ್ರೆ

Last Updated 24 ಡಿಸೆಂಬರ್ 2019, 10:57 IST
ಅಕ್ಷರ ಗಾತ್ರ

ನಾಗಪುರ: ಶಿವಸೇನಾವು ಧರ್ಮವನ್ನು ರಾಯಕೀಯದೊಂದಿಗೆ ಬೆರೆಸಿದ್ದು ಮತ್ತು ಬಿಜೆಪಿಯೊಂದಿಗೆ ಇದ್ದದ್ದು ತಪ್ಪು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಮತ್ತು ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ತಿಳಿಸಿದ್ದಾರೆ.

ಹಿಂದುತ್ವವನ್ನು ಮುಂದಿಟ್ಟುಕೊಂಡೇ ರಾಜಕೀಯ ಮಾಡುತ್ತಿದ್ದ ಉದ್ಧವ್ ಠಾಕ್ರೆ ಕಾಂಗ್ರೆಸ್ ಮತ್ತು ಎನ್‌ಸಿಪಿಯೊಂದಿಗೆ ಸೇರಿ ಸರ್ಕಾರ ರಚಿಸಿದ ಬಳಿಕ ಈ ಮೂಲಕ ಬಿಜೆಪಿಗೆ ಟಾಂಗ್ ನೀಡಿದ್ದಾರೆ.

ಕಳೆದ ವಾರ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಪಕ್ಷದ ಸಿದ್ಧಾಂತವನ್ನು ಗಾಳಿಗೆ ತೂರಿ ಕಾಂಗ್ರೆಸ್ ಮತ್ತು ಎನ್‌ಸಿಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವ ಕುರಿತು ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ನೀಡಿದ ಟಾಂಟ್‌ಗೆ ಪ್ರತಿಕ್ರಿಯಿಸಿ, ಬಿಜೆಪಿ ಕೂಡ ವಿರೋಧಿ ಸಿದ್ಧಾಂತ ಹೊಂದಿದ್ದ ಮಮತಾ ಬ್ಯಾನರ್ಜಿ, ರಾಮ್ ವಿಲಾಸ್ ಪಾಸ್ವಾನ್ ಮತ್ತು ಜಮ್ಮು ಮತ್ತು ಕಾಶ್ಮೀರದ ಪಿಡಿಪಿಯೊಂದಿಗೆ ಮಾಡಿಕೊಂಡಿದ್ದ ಮೈತ್ರಿ ಕುರಿತು ಎಚ್ಚರಿಸಿದರು. ಧರ್ಮ ಮತ್ತು ರಾಜಕೀಯವನ್ನು ಬೆರೆಸಿದ್ದು ಮತ್ತು ಬಿಜೆಪಿಯೊಂದಿಗೆ ಇದ್ದದ್ದೇ ನಾವು ಮಾಡಿದ ತಪ್ಪು ಎಂದು ಹೇಳಿದ್ದಾರೆ.

ನೀವು(ದೇವೇಂದ್ರ ಫಡಣವೀಸ್) ಜನರ ತೀರ್ಪಿನ ಬಗ್ಗೆ ಮಾತನಾಡುತ್ತೀರಿ. ಆದರೆ ಇದು ರಾಜಕೀಯ. ಬಹುಶಃ ನಾವು ರಾಜಕೀಯ ಮತ್ತು ಧರ್ಮವನ್ನು ಬೆರೆಸಿ ತಪ್ಪು ಮಾಡುತ್ತಿದ್ದೆವು. ಆದರೆ ಆ ವೇಳೆಯಲ್ಲಿ ನಾವು 'ಧರ್ಮ'ದ ಅನುಯಾಯಿಗಳಾಗಿ ಸಹ ಜೂಜಿನಲ್ಲಿ ಸೋತಿದ್ದೇವೆ ಎಂಬುದನ್ನು ಮರೆತಿದ್ದೆವು (ಮಹಾಭಾರತದ ಉಲ್ಲೇಖ). ರಾಜಕೀಯವು ಒಂದು ಜೂಜು ಎಂದು ಹೇಳಿದ್ದಾರೆ.

ಹಾಗಾಗಿ ಎಲ್ಲವನ್ನು ಸರಿಯಾದ ಸ್ಥಳದಲ್ಲಿಡಬೇಕು. ಇದನ್ನು ನಾವು ಮರೆತಿದ್ದೆವು. ಹಾಗಾಗಿ ನಾವು ಧರ್ಮ ಮತ್ತು ರಾಜಕೀಯವನ್ನು ಬೆರೆಸಲು ಪ್ರಾರಂಭಿಸಿದೆವು ಮತ್ತು ಅದಕ್ಕಾಗಿ ನಾವು ಬೆಲೆ ತೆತ್ತಿದ್ದೇವೆ. ಕಳೆದ 25 ವರ್ಷಗಳಿಂದಲೂ ನಾವು ಒಟ್ಟಿಗಿದ್ದೆವು ಮತ್ತು ಅದು ಕೇವಲ ಹಿಂದುತ್ವಕ್ಕಾಗಿ ಇದ್ದೆವು. ನಾವು ಧರ್ಮವನ್ನು ಬದಲಾಯಿಸಿಲ್ಲ ಎಂದರು.

ನಾವು ನೆನ್ನೆ, ಇಂದು ಮತ್ತು ನಾಳೆಯು ಹಿಂದುಗಳಾಗಿಯೇ ಇರುತ್ತೇವೆ. ಆದರೆ ನಿಮ್ಮ ಬಗ್ಗೆ ಹೇಳಿ? ಸಿದ್ಧಾಂತ ಬೇರೆಯಾಗಿದ್ದರೂ ಕೂಡ ನೀವು ಯಾರೊಂದಿಗೆ ಬೇಕಾದರೂ ಮೈತ್ರಿ ಮಾಡಿಕೊಳ್ಳುತ್ತೀರಿ. ಧರ್ಮವು ಕೇವಲ ಮಾತನಾಡುವುದಕ್ಕಷ್ಟೇ ಸೀಮಿತವಲ್ಲ. ಬದಲಿಗೆ ಅದನ್ನು ಅನುಸರಿಸಲೇಬೇಕು. ಧರ್ಮವು ಕೇವಲ ಪುಸ್ತಕದಲ್ಲಿರುವುದಲ್ಲ. ಅದು ನಿಜ ಜೀವನದಲ್ಲಿಯೂ ಇರಬೇಕು. ನಮ್ಮ ಸರ್ಕಾರವು ಯಾರು ಆಟೋದಲ್ಲಿ ಪ್ರಯಾಣಿಸುತ್ತಾರೋ ಅವರಿಗಾಗಿ. ಬುಲೆಟ್ ರೈಲಿನಲ್ಲಿ ಓಡಾಡುವವರಿಗಾಗಿ ಅಲ್ಲ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT