ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಲಾಕ್ ಡೌನ್: ಕೇಂದ್ರದ ಜೊತೆ ಸಹಕರಿಸುವುದಾಗಿ ಪಶ್ಚಿಮಬಂಗಾಳ ಪತ್ರ

Last Updated 22 ಏಪ್ರಿಲ್ 2020, 6:06 IST
ಅಕ್ಷರ ಗಾತ್ರ
ADVERTISEMENT
""

ಕೊಲ್ಕೊತಾ (ಪಶ್ಚಿಮ ಬಂಗಾಳ): ಕೊರೊನಾ ಹರಡುವುದನ್ನು ತಡೆಯಲು ಲಾಕ್‌‌ಡೌನ್ ಕಟ್ಟು ನಿಟ್ಟಿನ ಜಾರಿ ಸೇರಿದಂತೆ ಕೇಂದ್ರದ ಜೊತೆ ಸಹಕರಿಸುವುದಾಗಿ ಪಶ್ಚಿಮ ಬಂಗಾಳ ತಿಳಿಸಿದೆ.

ಈ ಸಂಬಂಧ ಕೇಂದ್ರ ಗೃಹ ಇಲಾಖೆಯ ಪತ್ರಕ್ಕೆ ಪತ್ರದ ಮೂಲಕ ಪ್ರತಿಕ್ರಿಯೆ ನೀಡಿರುವ ಪಶ್ಚಿಮ ಬಂಗಾಳ ಮುಖ್ಯ ಕಾರ್ಯದರ್ಶಿ ರಾಜೀವ್ ಸಿನ್ಹಾ ಮಂಗಳವಾರ ಬರೆದಿರುವ ಪತ್ರದಲ್ಲಿ, ಕೇಂದ್ರ ತಂಡವು ರಾಜ್ಯಕ್ಕೆ ಭೇಟಿ ನೀಡುವ ಮುನ್ನ ತಮಗೆ ಮಾಹಿತಿ ನೀಡಿಲ್ಲ.ಮಾಹಿತಿ ನೀಡದೆ ತಂಡವು ರಾಜ್ಯಕ್ಕೆ ಆಗಮಿಸಿದ್ದು, ತಮ್ಮ ಸ್ವಂತ ನಿರ್ಧಾರದಂತೆ ಬಿಎಸ್ ಎಫ್ ಅತಿಥಿ ಗೃಹ ಹಾಗೂ ಸಿಲುಗುರಿ ಅತಿಥಿ ಗೃಹಗಳಲ್ಲಿಉಳಿದುಕೊಂಡಿವೆ.

ಅಲ್ಲದೆ, ತಂಡದ ಮುಖ್ಯಸ್ಥರಾದ ಅಪೂರ್ವಚಂದ್ರ ತಮ್ಮನ್ನು ಏಪ್ರಿಲ್ 20ರಂದು ಭೇಟಿ ಮಾಡಿದ್ದರು. ಈ ಸಂಬಂಧ ತಾವಿಬ್ಬರು ಕೊರೊನಾ ತಡೆಗೆ ಜಾರಿಗೆ ತಂದಿರುವಲಾಕ್‌ಡೌನ್ ನಿಯಮಗಳ ಜಾರಿ ಕುರಿತು ರಾಜ್ಯ ತೆಗೆದುಕೊಂಡಿರುವ ಕ್ರಮಗಳ ಕುರಿತು ಚರ್ಚಿಸಿದೆವು. ಅಲ್ಲದೆ, ತಾವು ಸಿಲುಗುರಿಯಲ್ಲಿದ್ದ ತಂಡದ ವಿನೀತ್ ಜೋಷಿ ಅವರಿಗೆರಾಜ್ಯ ಸರ್ಕಾರ ತೆಗೆದುಕೊಂಡಿರುವ ಕ್ರಮಗಳನ್ನು ಮೇಲ್ ಮೂಲಕ ವಿವರವಾಗಿ ತಿಳಿಸಿದ್ದೇನೆ ಎಂದುಪತ್ರದಲ್ಲಿ ವಿವರಿಸಿದ್ದಾರೆ.

ಎರಡುಕೇಂದ್ರ ತಂಡಗಳೊಂದಿಗೆ ರಾಜ್ಯ ಸರ್ಕಾರಯಾವುದೇ ಸಹಕಾರ ನೀಡಿಲ್ಲ ಎಂಬುದುಸತ್ಯವಲ್ಲ. ನಾನುಒಂದು ತಂಡದೊಂದಿಗೆ ಸಭೆನಡೆಸಿದ್ದೇನೆಮತ್ತೊಂದು ತಂಡದೊಂದಿಗೆ ಸಂಪರ್ಕದಲ್ಲಿದ್ದೇನೆ ಎಂದು ರಾಜೀವ್ ಸಿನ್ಹಾ ತಿಳಿಸಿದ್ದಾರೆ.

ಲಾಕ್‌ಡೌನ್ ಕುರಿತು ಕಟ್ಟು ನಿಟ್ಟಿನ ಜಾರಿ ಹಾಗೂ2005 ವಿಪತ್ತು ನಿರ್ವಹಣಾಕಾಯ್ದೆ ಸೇರಿದಂತೆ ಕೇಂದ್ರ ಜಾರಿಗೆ ತರುವ ಎಲ್ಲಾ ಕಾನೂನುಗಳನ್ನು ರಾಜ್ಯ ಸರ್ಕಾರಪಾಲಿಸುವುದಾಗಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT