ಪಶ್ಚಿಮ ಬಂಗಾಳದಲ್ಲಿ ಕೇಂದ್ರ ಸರ್ಕಾರದ ನಡೆ ಅಪಾಯಕಾರಿ: ಕೇಜ್ರಿವಾಲ್

7

ಪಶ್ಚಿಮ ಬಂಗಾಳದಲ್ಲಿ ಕೇಂದ್ರ ಸರ್ಕಾರದ ನಡೆ ಅಪಾಯಕಾರಿ: ಕೇಜ್ರಿವಾಲ್

Published:
Updated:

ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಕೇಂದ್ರ ಸರ್ಕಾರದ ನಡೆ ಅಪಾಯಕಾರಿ. ಇದು ಸಂವಿಧಾನ ಮತ್ತು ಪ್ರಜಾಪ್ರಭುತ್ವ ವಿರೋಧಿ ನಡೆಯಾಗಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

ಪ್ರತಿ ರಾಜ್ಯಕ್ಕೂ ಮತದಾನದ ಮೂಲಕ ಆಯ್ಕೆ ಮಾಡಿದ ಸರ್ಕಾರವಿದೆ. ಪ್ರಧಾನಿಯವರು ದೇಶದಲ್ಲಿರುವ ಅಧಿಕಾರಿಗಳ ಬಳಿ ಸಿಬಿಐ ಮತ್ತು ಜಾರಿ ನಿರ್ದೇಶನಾಲಯದ ಅಧಿಕಾರಿಗಳ ತಂಡಗಳನ್ನು ಕಳಿಸಿ ಹೆದರಿಸುವುದಾದರೆ ಈ ದೇಶ ಸುರಕ್ಷಿತವಲ್ಲ ಎಂದಿದ್ದಾರೆ ಕೇಜ್ರಿವಾಲ್.

ಚುನಾವಣಾ ದಿನಾಂಕ ಘೋಷಣೆ ಆಗುವವರೆಗೆ ಏನು ಬೇಕಾದರೂ ನಡೆಯಬಹುದು: ನಿತೀಶ್ ಕುಮಾರ್ 
ಇದನ್ನು ಮಾಡುತ್ತಿರುವ ಜನರೇ ಈ ಬಗ್ಗೆ ವಿವರಣೆ ನೀಡಬೇಕು.  ನಾನು ಇಂಥ ವಿಷಯಗಳ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ. ಸಿಬಿಐ ಮತ್ತು ಸರ್ಕಾರ ಈ ಬಗ್ಗೆ ವಿವರಿಸುತ್ತದೆ. ಚುನಾವಣಾ ಆಯೋಗ ಚುನಾವಣಾ ದಿನಾಂಕ ಘೋಷಿಸುವವರೆಗೆ ಈ ದೇಶದಲ್ಲಿ ಏನು ಬೇಕಾದರೂ ನಡೆಯಬಹುದು ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ.

ಇದು ಒಳ್ಳೆಯ ಬೆಳವಣಿಗೆ ಅಲ್ಲ: ಕುಮಾರಸ್ವಾಮಿ
ಇದು ಒಳ್ಳೆಯ ಬೆಳವಣಿಗೆ ಅಲ್ಲ.  ಕೇಂದ್ರ  ಸರ್ಕಾರ ಸರಿಯಾದ ರೀತಿಯಲ್ಲಿ ನಡೆದುಕೊಂಡು ರಾಜ್ಯ ಸರ್ಕಾರಗಳ ವಿಶ್ವಾಸವನ್ನು ಗೆಲ್ಲಬೇಕು. ಕೇಂದ್ರ ಸರ್ಕಾರ ಸಂವಿಧಾನಿಕ ಸಂಸ್ಥೆಗಳನ್ನು ದುರ್ಬಳಕೆ ಮಾಡುತ್ತಿದೆ. ಇದು ಭವಿಷ್ಯದಲ್ಲಿ ಒಳ್ಳೆಯದಲ್ಲ. ವಿಪಕ್ಷದ ನಾಯಕರೊಂದಿಗೆ ಕೇಂದ್ರ ಸರ್ಕಾರದ ವರ್ತನೆ ದುರದೃಷ್ಟಕರ ಎಂದು ಕರ್ನಾಟಕ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಸಿಬಿಐ ಅನ್ನು ದುರ್ಬಳಕೆ ಮಾಡಿದರೆ ಫೆಡರಲ್ ವ್ಯವಸ್ಥೆಯನ್ನು ಅದು ಭಾದಿಸುತ್ತದೆ: ಮುಫ್ತಿ
ವಿರೋಧಿಗಳನ್ನು ಎದುರಿಸಲು ಸಿಬಿಐ ಸಂಸ್ಥೆಯನ್ನು ಬಳಸುತ್ತಿರುವುದು ದುರದೃಷ್ಟಕರ. ನಾವು ಮಮತಾ ಅವರಿಗೆ ಬೆಂಬಲ ನೀಡುತ್ತೇವೆ. ಸಾಂವಿಧಾನಿಕ ಸಂಸ್ಥೆಗಳನ್ನು ಇದೇ ರೀತಿ ದುರ್ಬಳಕೆ ಮಾಡಿದರೆ ಫೆಡರಲ್ ವ್ಯವಸ್ಥೆಯನ್ನು ಅದು ಬಾಧಿಸುತ್ತದೆ ಎಂದು ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಹೇಳಿದ್ದಾರೆ.

ಇದನ್ನೂ ಓದಿ

ಪ್ರಾದೇಶಿಕವಾಗಿ ವಿಭಜನೆಯಾಗಿರುವ ಮಹಾಘಟಬಂಧನ್, ಭ್ರಷ್ಟಾಚಾರದ ಮೂಲಕ ಒಗ್ಗಟ್ಟಾಗಿದೆ

ಬಿಜೆಪಿಯಷ್ಟು ಭ್ರಷ್ಟ ಪಕ್ಷ ಬೇರೊಂದಿಲ್ಲ: ಗುಲಾಂ ನಬಿ ಆಜಾದ್

ರೈತರ ದುಃಸ್ಥಿತಿಗೆ ಮೋದಿ ಸರ್ಕಾರವೇ ಹೊಣೆ: ಮಮತಾ ಬ್ಯಾನರ್ಜಿ

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 1

  Sad
 • 0

  Frustrated
 • 8

  Angry

Comments:

0 comments

Write the first review for this !