ಭಾನುವಾರ, ಸೆಪ್ಟೆಂಬರ್ 22, 2019
21 °C

ನಾನೇಕೆ ಪ್ರಧಾನಿಗೆ ಹೊಡೆಯಲಿ? : ಮಮತಾ ಬ್ಯಾನರ್ಜಿ

Published:
Updated:

ಕೋಲ್ಕತ್ತ: ನಾನು ಪ್ರಧಾನಿ ನರೇಂದ್ರ ಮೋದಿಗೆ ಹೊಡೆಯುತ್ತೇನೆ ಎಂದು ಹೇಳಿಲ್ಲ, ಅವರಿಗೆ ಪ್ರಜಾಪ್ರಭುತ್ವದ ಹೊಡೆತ ಬೀಳಲಿದೆ ಎಂದು ನಾನು ಹೇಳಿದ್ದೆ ಎಂದಿದ್ದಾರೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ.

ಪಶ್ಚಿಮ ಬಂಗಾಳದಲ್ಲಿ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮೋದಿ, ದೀದಿ ನನಗೆ ಹೊಡೆದರೆ ನಾನು ಅದನ್ನು ಆಶೀರ್ವಾದದಂತೆ ಸ್ವೀಕರಿಸುತ್ತೇನೆ ಎಂದಿದ್ದಾರೆ.

ಪುರುಲಿಯ ಜಿಲ್ಲೆಯ ಸಿಮುಲಿಯದಲ್ಲಿ ಆರನೇ ಹಂತದ ಮತದಾನಕ್ಕೆ ಮುನ್ನ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮಮತಾ, ನಾನು ಪ್ರಜಾಪ್ರಭುತ್ವದ ಹೊಡೆತ ಎಂದು ಹೇಳಿದ್ದೇನೆಯೇ ಹೊರತು ಮೋದಿಗೆ ಹೊಡೆಯುತ್ತೇನೆ ಎಂದಿಲ್ಲ. ಮೋದಿಗೆ ಜನಾಭಿಪ್ರಾಯದ ಹೊಡೆತ ಸಿಗಲಿದೆ ಎಂದು ನಾನು ಹೇಳಿದ್ದು. ಆದರೆ ನಾನು ಅವರಿಗೆ ಹೊಡೆಯುತ್ತೇನೆ ಎಂದು ಹೇಳಿದ್ದೆ ಅಂತಾರೆ ಮೋದಿ. ಭಾಷೆಯನ್ನು ಮೊದಲು ಅರ್ಥ ಮಾಡಿಕೊಳ್ಳಿ ಎಂದಿದ್ದಾರೆ ಮಮತಾ.

ನಾನೇಕೆ ಮೋದಿಗೆ ಹೊಡೆಯಲಿ? ನಾನು ಆ ರೀತಿಯ ವ್ಯಕ್ತಿ ಅಲ್ಲ. ನಾನು ಹೇಳಿದ್ದು ಪ್ರಜಾಪ್ರಭುತ್ವದ ಬಗ್ಗೆ, ಪ್ರಜಾಪ್ರಭುತ್ವದ ಹೊಡೆತ ಅಂದರೆ ಜನಾದೇಶ, ಜನರ ಮತದಾನದ ಬಗ್ಗೆ ಎಂದು ಮಮತಾ ವಿವರಣೆ ನೀಡಿದ್ದಾರೆ.

ಮಂಗಳವಾರ ರಘುನಾಥಪುರದಲ್ಲಿ ಪ್ರಚಾರ ನಡೆಸಿದ ಮಮತಾ, ಮೋದಿಯವರಿ ಪ್ರಜಾಪ್ರಭುತ್ವದ ಹೊಡೆತ ಬೀಳಲಿದೆ ಎಂದಿದ್ದರು.
 

Post Comments (+)