ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆಗ್ರಾ’ ಹೆಸರನ್ನು ಬದಲಿಸಲಿದೆಯೇ ಯೋಗಿ ಆದಿತ್ಯನಾಥ್ ಸರ್ಕಾರ?

ಹಿಂದೆ ಬೇರೆ ಯಾವುದಾದರೂ ಹೆಸರಿನಿಂದ ಕರೆಯಲಾಗುತ್ತಿತ್ತೇ ಎಂಬುದನ್ನು ಪರಿಶೀಲಿಸಲು ಸಮಿತಿ ರಚನೆ
Last Updated 18 ನವೆಂಬರ್ 2019, 14:34 IST
ಅಕ್ಷರ ಗಾತ್ರ

ಆಗ್ರಾ:ತಾಜ್‌ಮಹಲ್‌ನಿಂದಾಗಿ ವಿಶ್ವವಿಖ್ಯಾತಿ ಪಡೆದಿರುವ ‘ಆಗ್ರಾ’ದ ಹೆಸರನ್ನು ಬದಲಾಯಿಸಲು ಉತ್ತರ ಪ್ರದೇಶ ಸರ್ಕಾರ ಮುಂದಾಗಿದೆಯೇ? ಇಂತಹದ್ದೊಂದು ಅನುಮಾನ ಇದೀಗ ವ್ಯಕ್ತವಾಗಿದೆ.

ಆಗ್ರಾವನ್ನು ಹಿಂದೆ ಬೇರೆ ಯಾವುದಾದರೂ ಹೆಸರಿನಿಂದ ಕರೆಯಲಾಗುತ್ತಿತ್ತೇ ಎನ್ನುವ ಕುರಿತು ಪರಿಶೀಲನೆ ನಡೆಸಲು ಭೀಮರಾವ್ ಅಂಬೇಡ್ಕರ್ ವಿಶ್ವವಿದ್ಯಾಲಯ ಸಮಿತಿಯೊಂದನ್ನು ರಚಿಸಿರುವುದೇ ಅನುಮಾನಕ್ಕೆ ಕಾರಣ.

ಸಮಿತಿ ರಚನೆ ಹಿನ್ನೆಲೆಯಲ್ಲಿ ಯೋಗಿ ಆದಿತ್ಯನಾಥ ನೇತೃತ್ವದ ಉತ್ತರ ಪ್ರದೇಶ ಸರ್ಕಾರ, ಆಗ್ರಾ ಹೆಸರು ಬದಲಿಸಲು ಮುಂದಾಗಿದೆ ಎನ್ನುವ ಶಂಕೆ ಮೂಡಿದೆ.

‘ಸ್ಥಳೀಯ ಆಡಳಿತದ ಸೂಚನೆ ಮೇರೆಗೆ ಸಮಿತಿ ರಚಿಸಲಾಗಿದೆ’ ಎಂದು ವಿಶ್ವವಿದ್ಯಾಲಯದ ಕುಲಸಚಿವ ಅರವಿಂದ್ ದೀಕ್ಷಿತ್ ತಿಳಿಸಿದ್ದಾರೆ.

ಉತ್ತರ ಪ್ರದೇಶ ಸರ್ಕಾರದ ‘ಮುದ್ರಾಂಕ ಮತ್ತು ನೋಂದಣಿ ಇಲಾಖೆ’ ವೆಬ್‌ಸೈಟ್‌ನಲ್ಲಿ ಆಗ್ರಾದ ಹೆಸರು ಬದಲಿಸಬೇಕು ಎಂದು ಕೆಲವು ಸ್ಥಳೀಯರು ಆಗ್ರಹಿಸಿದ್ದರು. ಈ ವಿಷಯವನ್ನು ಸ್ಥಳೀಯ ಆಡಳಿತದ ಗಮನಕ್ಕೆ ತರಲಾಗಿತ್ತು. ಆಡಳಿತ ಈ ವಿಷಯವನ್ನು ವಿಶ್ವವಿದ್ಯಾಲಯಕ್ಕೆ ವರ್ಗಾಯಿಸಿದೆ ಎನ್ನಲಾಗಿದೆ.

ಮುಘಲ್‌ಸರೈ ರೈಲು ನಿಲ್ದಾಣದ ಹೆಸರನ್ನು ಕಳೆದ ವರ್ಷ ದೀನ್‌ ದಯಾಳ್‌ ಉಪಾಧ್ಯಾಯ ಜಂಕ್ಷನ್‌ ಎಂದು ಬದಲಾಯಿಸಲಾಗಿತ್ತು. ಅದೇ ರೀತಿ ಅಲಹಾಬಾದ್ ಅನ್ನು ಪ್ರಯಾಗ್‌ರಾಜ್ ಎಂದೂ ಯೋಗಿ ಸರ್ಕಾರ ಮರುನಾಮಕರಣ ಮಾಡಿತ್ತು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT