ಲೋಕಸಭೆಯಲ್ಲಿ ಸ್ತ್ರೀ ಶಕ್ತಿ

ಗುರುವಾರ , ಏಪ್ರಿಲ್ 25, 2019
33 °C

ಲೋಕಸಭೆಯಲ್ಲಿ ಸ್ತ್ರೀ ಶಕ್ತಿ

Published:
Updated:
Prajavani

ಭಾರತದ ಮೊದಲ ಲೋಕಸಭೆಯಲ್ಲೂ ಮಹಿಳೆಯರ ಪ್ರಾತಿನಿಧ್ಯವಿತ್ತು. ನಂತರದ ಪ್ರತಿ ಲೋಕಸಭೆಯಲ್ಲೂ ಸಂಸದೆಯರ ಸಂಖ್ಯೆ ಹೆಚ್ಚುತ್ತಲೇ ಬಂದಿದೆ. ಪ್ರಸಕ್ತ(2014–19) ಲೋಕಸಭೆಯಲ್ಲಿಯೇ ಮಹಿಳೆಯರಿಗೆ ಅತಿ ಹೆಚ್ಚು ಪ್ರಾತಿನಿಧ್ಯ ಸಿಕ್ಕಿದೆ. ಆದರೆ ಪ್ರಾತಿನಿಧ್ಯದ ಪ್ರಮಾಣ ಶೇ 10ರ ಆಸುಪಾಸಿನಲ್ಲೇ ಇದೆ. ಮಹಿಳೆಯರಿಗೆ ಶೇ 33ರಷ್ಟು ಸ್ಥಾನಗಳನ್ನು ಮೀಸಲಿರಿಸುವ ಮಸೂದೆ ನನೆಗುದಿಗೆ ಬಿದ್ದಿದೆ.

ಭಾರತದ ಸಂಪುಟದಲ್ಲಿ ಮಹಿಳೆಯರು

ವರ್ಷ;ಮಹಿಳಾ ಸಚಿವರ ಸಂಖ್ಯೆ;ಸಚಿವರ ಸಂಖ್ಯೆ

1985; 4; 40

1990; 2; 39
1996; 1; 39
2004; 7; 68
2011; 7; 76
2012; 8; 74
2013; 9; 78
2014; 7; 45
2015; 8; 45
2016; 9; 75
2017; 9; 75
2019; 9; 71

ವಿವಿಧ ದೇಶಗಳ ಸಂಪುಟದಲ್ಲಿ ಮಹಿಳೆಯರು

9 ಸಂಪುಟದಲ್ಲಿ ಮಹಿಳೆಯರಿಗೆ ಶೇ 50ಕ್ಕಿಂತ ಹೆಚ್ಚಿನ ಪ್ರಾತಿನಿಧ್ಯ ನೀಡಿರುವ ದೇಶಗಳ ಸಂಖ್ಯೆ

64.7%: ಸ್ಪೇನ್

55.6%: ನಿಕರಾಗ್ವಾ

54.4%: ಸ್ವೀಡನ್

53.3%: ಅಲ್ಬೇನಿಯಾ

52.9%: ಕೊಲಂಬಿಯಾ

51.9%: ಕೋಸ್ಟ ರಿಕಾ

51.9%: ರವಾಂಡ

50%: ಕೆನಡ

50%: ಫ್ರಾನ್ಸ್‌

ಮಹಿಳಾ ಮೀಸಲು ಮತ್ತೆ ಮುನ್ನೆಲೆಗೆ

*ಲೋಕಸಭೆ ಚುನಾವಣೆ ನಡೆಯುತ್ತಿರುವ ಹೊತ್ತಿನಲ್ಲಿ ಲೋಕಸಭೆಯಲ್ಲಿ ಮಹಿಳಾ ಮೀಸಲು ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ

*ತೃಣಮೂಲ ಕಾಂಗ್ರೆಸ್‌ ತನ್ನ ಒಟ್ಟು ಅಭ್ಯರ್ಥಿಗಳಲ್ಲಿ ಶೇ 41ರಷ್ಟು ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿರಿಸಿದೆ

*ಶೇ 33ರಷ್ಟು ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುತ್ತೇವೆ ಎಂದು ಬಿಜೆಡಿ ಘೋಷಿಸಿದೆ

*ಮಹಿಳಾ ಮೀಸಲು ಮಸೂದೆಗೆ ಅನುಮೋದನೆ ದೊರೆಯುವಂತೆ ಪ್ರಯತ್ನಿಸುತ್ತೇವೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ

ಆಧಾರ: ಲೋಕಸಭೆ, ಅಂತರ–ಸಂಸದೀಯ ಒಕ್ಕೂಟ, ಸರ್ಕಾರದ ವರದಿಗಳು

ಬರಹ ಇಷ್ಟವಾಯಿತೆ?

 • 3

  Happy
 • 1

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !