ಸೋಮವಾರ, ಮಾರ್ಚ್ 8, 2021
27 °C

ಸಂಸತ್ ಭವನ ಮರುಅಭಿವೃದ್ಧಿಗೆ ಮುಂದಿನ ವರ್ಷ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ‘2022ರ ಚಳಿಗಾಲದ ಸಂಸತ್ ಅಧಿವೇಷನವು ಹೊಸದಾಗಿ ಅಭಿವೃದ್ಧಿಪಡಿಸಲಾದ ಸಂಸತ್ ಭವನದಲ್ಲಿ ನಡೆಯಲಿದೆ. 2024ರಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ. ಆಗ ನಾವೆಲ್ಲಾ (ಸಂಸದರು) ನೂತನ ಸಂಸತ್ ಭವನದಲ್ಲಿ ಇರಲಿದ್ದೇವೆ. ಈಗಿನ ರಾಷ್ಟ್ರಪತಿ ಭವನ– ಇಂಡಿಯಾ ಗೇಟ್ ನಡುವಣ ಸೆಂಟ್ರಲ್ ವಿಸ್ತಾ ಪ್ರದೇಶದಲ್ಲಿ ಎಲ್ಲಾ ಸಚಿವಾಲಯಗಳನ್ನು ಒಳಗೊಂಡ ಕೇಂದ್ರ ಸಂಕೀರ್ಣವನ್ನು ನಿರ್ಮಿಸಲಾಗುತ್ತದೆ. ಮುಂದಿನ ವರ್ಷದ ಆರಂಭದಲ್ಲೇ ಈ ಕಾಮಗಾರಿಗಳು ಆರಂಭವಾಗಲಿವೆ’ ಎಂದು ಕೇಂದ್ರ ಸಚಿವ ಹರ್‌ದೀಪ್ ಸಿಂಗ್ ಪುರಿ ಶುಕ್ರವಾರ ಹೇಳಿದ್ದಾರೆ. ಕೇಂದ್ರ ಸರ್ಕಾರದ ಈ ಮಹತ್ವಾಕಾಂಕ್ಷಿ ಯೋಜನೆ ಬಗ್ಗೆ ಹೊರಬಿದ್ದ ಮೊದಲ ಅಧಿಕೃತ ಮಾಹಿತಿ ಇದು

 

ಅಭಿವೃದ್ಧಿ ಪ್ರಸ್ತಾವದ ಹಿಂದಿನ ಕಾರಣಗಳು

47 ಈ ಪ್ರದೇಶದಲ್ಲಿ ಇರುವ ಕಟ್ಟಡಗಳ ಸಂಖ್ಯೆ. ಈ ಕಟ್ಟಡಗಳಲ್ಲಿ ಸರ್ಕಾರಿ ಕಚೇರಿಗಳಿವೆ. ಸಿಬ್ಬಂದಿಯು ಕಚೇರಿಯಿಂದ ಕಚೇರಿಗೆ ಓಡಾಡುವಲ್ಲೇ ಬಹುತೇಕ ಸಮಯ ವ್ಯರ್ಥವಾಗುತ್ತದೆ. ಎಲ್ಲಾ ಕಚೇರಿಗಳು ಒಂದೆಡೆಯೇ ಇದ್ದರೆ ಕಾರ್ಯನಿರ್ವಹಣೆ ಸುಲಭವಾಗುತ್ತದೆ

70,000 ಈ ಕಟ್ಟಡಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸರ್ಕಾರಿ ನೌಕರರ ಸಂಖ್ಯೆ. ಇವರಿಗೆ ಲಭ್ಯವಿರುವ ಮೂಲಸೌಕರ್ಯಗಳನ್ನು ಮೇಲ್ದರ್ಜೆಗೆ ಏರಿಸಬೇಕಿದೆ. ಇವೆಲ್ಲವನ್ನೂ ನೂತನ ಕಟ್ಟಡದಲ್ಲೇ ನಿರ್ಮಿಸಿದರೆ ವೆಚ್ಚ ಕಡಿಮೆಯಾಗಲಿದೆ ಮತ್ತು ನಿರ್ವಹಣೆ ಸುಲಭವಾಗಲಿದೆ

₹ 1,000 ಕೋಟಿ ವಿವಿಧ ಸಚಿವಾಲಯಗಳು ಪ್ರತಿವರ್ಷ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲು ವಿನಿಯೋಗಿಸುತ್ತಿರುವ ಒಟ್ಟು ಹಣ. ನೂತನ ಕೇಂದ್ರೀಕೃತ ಸೆಕ್ರೇಟರಿಯೇಟ್ ನಿರ್ಮಾಣದ ನಂತರ ಈ ವೆಚ್ಚ ಗಣನೀಯ ಪ್ರಮಾಣದಲ್ಲಿ ತಗ್ಗಲಿದೆ

40–50 ವರ್ಷ ಇಲ್ಲಿರುವ ಬಹುತೇಕ ಕಟ್ಟಡಗಳ ಸರಾಸರಿ ಆಯಸ್ಸು. ಈ ಕಟ್ಟಡಗಳು ಭೂಕಂಪವನ್ನು ತಡೆದುಕೊಳ್ಳುವ ಸಾಮರ್ಥ್ಯವಿಲ್ಲ. ಸಿಬ್ಬಂದಿ, ದಾಖಲೆ ಮತ್ತು ಆಸ್ತಿಯ ರಕ್ಷಣೆ ಉದ್ದೇಶದಿಂದ ನೂತನ ಮತ್ತು ಅತ್ಯಾಧುನಿಕ ಕಟ್ಟಡಗಳ ಅವಶ್ಯಕತೆ ಇದೆ. ಹೀಗಾಗಿ ಇಂತಹ ಎಲ್ಲಾ ಕಟ್ಟಡಗಳನ್ನು ಕೆಡವಲಾಗುತ್ತದೆ

ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ನಂತರ ಸಂಸದರ ಸಂಖ್ಯೆ ಹೆಚ್ಚಲಿದೆ. ಆಗ ಈಗಿನ ಸಂಸತ್ ಭವನದಲ್ಲಿ ಜಾಗದ ಕೊರತೆ ಆಗಲಿದೆ. ಹೀಗಾಗಿ ಹೊಸ ಕಟ್ಟಡದ ಅವಶ್ಯಕತೆ ಇದೆ. ಸಂಪನ್ಮೂಲಗಳ ಸದ್ಬಳಕೆ, ಕಾಗದ ರಹಿತ ವಾತಾವರಣ, ಸಂಪೂರ್ಣ ಡಿಜಿಟಲ್ ವ್ಯವಸ್ಥೆ ಇರುವ ಸಂಸತ್ ಭವನವನ್ನು ನಿರ್ಮಿಸುವ ಉದ್ದೇಶವಿದೆ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು