ಭಾನುವಾರ, ಸೆಪ್ಟೆಂಬರ್ 15, 2019
23 °C

ಬಿಜೆಪಿಗೆ ಲಾಭ ಮಾಡಿಕೊಡುವುದಕ್ಕಿಂತ ಸಾಯುವುದೇ ಲೇಸು: ಪ್ರಿಯಾಂಕಾ 

Published:
Updated:

ನವದೆಹಲಿ: ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ ಪಕ್ಷವು ಎಸ್‌ಪಿ–ಬಿಎಸ್‌ಪಿ ಮೈತ್ರಿಕೂಟದ ಮತಗಳಿಗೆ ಕತ್ತರಿ ಹಾಕುತ್ತಿಲ್ಲ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ.
ಲಖನೌದಲ್ಲಿ ಬುಧವಾರ ಮಾತನಾಡಿದ ಪ್ರಿಯಾಂಕಾ ನಮ್ಮ ಕಾರ್ಯತಂತ್ರ ಸ್ಪಷ್ಟವಾಗಿದೆ. ನಾವು ಬಿಜೆಪಿಯನ್ನು ಪರಾಭವಗೊಳಿಸಬೇಕು. ಕಾಂಗ್ರೆಸ್ ಪ್ರಬಲವಾಗಿರುವ ಕ್ಷೇತ್ರಗಲ್ಲಿ ಅಭ್ಯರ್ಥಿಗಳು ಗೆಲ್ಲುತ್ತಾರೆ. ದುರ್ಬಲ ಅಭ್ಯರ್ಥಿಗಳಿರುವ ಕ್ಷೇತ್ರಗಳಲ್ಲಿ ಬಿಜೆಪಿಯ ಮತಕ್ಕೆ ಕತ್ತರಿ ಬೀಳುತ್ತದೆ ಎಂದಿದ್ದರು.

ಅಂದಹಾಗೆ ಕಾಂಗ್ರೆಸ್ ಯಾವುದೇ ಕ್ಷೇತ್ರಗಳಲ್ಲಿ ದುರ್ಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ ಎಂದು ನನಗನಿಸುವುದಿಲ್ಲ. ಯಾವುದೇ ಪಕ್ಷಗಳು ಈ ರೀತಿ ಮಾಡುವುದಿಲ್ಲ. ಜನರು ಅವರೊಂದಿಗೆ ಇಲ್ಲ ಹಾಗಾಗಿ ಅವರು ನೆಪ ಹುಡುಕುತ್ತಿದ್ದಾರೆ ಎಂದು ಅಖಿಲೇಶ್ ಯಾದವ್ ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದ್ದರು.

ಇದಕ್ಕೆ ಪ್ರತ್ರಿಯಿಸಿದ ಪ್ರಿಯಾಂಕಾ, ಬಿಜೆಪಿಗೆ ಲಾಭ ಮಾಡಿಕೊಡುವುದಕ್ಕಿಂತ ಸಾಯುವುದೇ ಲೇಸು. ಗೆಲುವಿನ ಅವಕಾಶ ಇರುವ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗಿದೆ ಅಥವಾ ಬಿಜೆಪಿ ಗೆಲುವಿಗೆ ಅಡ್ಡಿಯಾಗುವ ರೀತಿಯಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ ಎಂದಿದ್ದಾರೆ.

Post Comments (+)