ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ಟೋಬರ್‌ಗೆ ವಿಸ್ತರಿಸಿದ ಮುಂಗಾರು ಮುಕ್ತಾಯದ ಅವಧಿ: 59 ವರ್ಷಗಳಲ್ಲೇ ಇದು ದಾಖಲೆ

Last Updated 4 ಅಕ್ಟೋಬರ್ 2019, 3:55 IST
ಅಕ್ಷರ ಗಾತ್ರ

ಬೆಂಗಳೂರು: ಅಕ್ಟೋಬರ್‌ ತಿಂಗಳು ಬಂದರೂ ಮುಂಗಾರಿನ ಅವಧಿ ಇನ್ನೂ ಮುಗಿದಿಲ್ಲ. ಅ.10 ನಂತರ ಮುಂಗಾರು ಮಳೆ ಕೊನೆಯಾಗಲು ಶುರುವಾಗಬಹುದು ಎಂದು ಹವಾಮಾನ ಇಲಾಖೆ ಅಂದಾಜಿಸಿದ್ದು,59 ವರ್ಷಗಳಲ್ಲಿಯೇ ಅತ್ಯಂತ ತಡವಾಗಿ ಮುಕ್ತಾಯವಾಗುತ್ತಿರುವಮುಂಗಾರು ಇದು ಎನ್ನಿಸಿಕೊಂಡಿದೆ.

ಸಾಮಾನ್ಯವಾಗಿ ಜೂನ್‌ ಮೊದಲ ವಾರದಲ್ಲಿ ಆರಂಭವಾಗುವ ಮುಂಗಾರು ಸೆಪ್ಟೆಂಬರ್‌ ತಿಂಗಳಿನಲ್ಲಿ ಕೊನೆಗೊಳ್ಳಲು ಶುರುವಾಗುತ್ತದೆ. ಅಕ್ಟೋಬರ್‌ ಅಂತ್ಯದಿಂದ ಹಿಂಗಾರು ಮಳೆ ಪ್ರಾರಂಭವಾಗುತ್ತದೆ. ಆದರೆ, ಈ ಬಾರಿ ಮುಂಗಾರಿನ ಅವಧಿ ಇನ್ನಷ್ಟು ವಿಸ್ತಾರವಾಗಿದೆ. 59 ವರ್ಷಗಳಲ್ಲೇ ಇದು ಮೊದಲು.

1960ರಿಂದ ಪರಿಗಣಿಸಿದರೆ, 2007ರಲ್ಲಿ ಒಮ್ಮೆ ಅಕ್ಟೋಬರ್‌ 1ಕ್ಕೆ ಮುಂಗಾರು ಕೊನೆಯಾಗಲು ಪ್ರಾರಂಭವಾಗಿದ್ದು ಇಲ್ಲಿಯವರೆಗಿನ ದಾಖಲೆಯಾಗಿತ್ತು. ಅದಾದ ನಂತರ ಈ ವರ್ಷವೇ ಮುಂಗಾರು ಇನ್ನೂ ಮುಕ್ತಾಯವಾಗಿಲ್ಲ. ಬಿಹಾರ, ಕರ್ನಾಟಕ ಸೇರಿ ದೇಶದ ಕೆಲವು ಕಡೆಗಳಲ್ಲಿ ವರುಣನ ಆರ್ಭಟ ಇನ್ನೂ ಜೋರಾಗಿಯೇ ಇದ್ದು, ಪ್ರವಾಹ ಪರಿಸ್ಥಿತಿಯೂ ನಿರ್ಮಾಣವಾಗಿದೆ.

‘ಅಕ್ಟೋಬರ್‌ 10ರವರೆಗೂ ಮುಂಗಾರು ಮಳೆ ಕೊನೆಯಾಗುವ ಸೂಚನೆ ಇಲ್ಲ. ಜೂನ್‌ನಲ್ಲಿ ಕೇರಳದ ಕರಾವಳಿಯಿಂದ ಪ್ರವೇಶಿಸುವ ಮುಂಗಾರು, ಸೆಪ್ಟೆಂಬರ್ ಮೊದಲ ವಾರದಲ್ಲಿ ಪಶ್ಚಿಮ ರಾಜಸ್ಥಾನದಿಂದ ಮುಕ್ತಾಯವಾಗಲು ಪ್ರಾರಂಭಿಸುತ್ತದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಮಳೆಯಾಗುವ ನಿರೀಕ್ಷೆ ಇದೆ’ ಎಂದು ಐಎಂಡಿ ನಿರ್ದೇಶಕ ಮೃತ್ಯುಂಜಯ ಮಹೋಪಾತ್ರ ತಿಳಿಸಿದರು.

ಭಾರತೀಯ ಹವಾಮಾನ ಇಲಾಖೆಯು ಸಂಖ್ಯಾಶಾಸ್ತ್ರೀಯ ಮಾದರಿಯ ಆಧಾರದಲ್ಲಿ ಮುಂಗಾರು ಮತ್ತು ಇತರ ಹವಾಮಾನ ಮುನ್ಸೂಚನೆಯನ್ನು ನೀಡುತ್ತದೆ. ಆದರೆ, ಮುಂಗಾರು ಇಷ್ಟು ಪ್ರಬಲವಾಗಿರಲಿದೆ ಎನ್ನುವುದನ್ನು ಗುರುತಿಸುವಲ್ಲಿ ಇಲಾಖೆ ವಿಫಲವಾಗಿದೆ ಎನ್ನುವುದು ತಜ್ಞರ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT