ಆಯೋಗಕ್ಕೆ ಮತ್ತೆ ಪತ್ರ ಬರೆದ ಯೆಚೂರಿ

ಶುಕ್ರವಾರ, ಏಪ್ರಿಲ್ 19, 2019
22 °C

ಆಯೋಗಕ್ಕೆ ಮತ್ತೆ ಪತ್ರ ಬರೆದ ಯೆಚೂರಿ

Published:
Updated:
Prajavani

ನವದೆಹಲಿ: ‘ಮಿಶನ್ ಶಕ್ತಿ’ ಯಶಸ್ವಿ ಕಾರ್ಯಾಚರಣೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಟಿ.ವಿ ಹಾಗೂ ರೇಡಿಯೊ ಮೂಲಕ ಘೋಷಿಸಿದ್ದು ಚುನಾವಣಾ ನೀತಿಸಂಹಿತೆಯ ಸ್ಪಷ್ಟ ಉಲ್ಲಂಘನೆ ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಅವರು ಪುನಃ ಪ್ರತಿಪಾದಿಸಿದ್ದಾರೆ.

ಮೋದಿ ಅವರು ನೀತಿಸಂಹಿತೆ ಉಲ್ಲಂಘಿಸಿಲ್ಲ ಎಂದು ಚುನಾವಣಾ ಆಯೋಗ ಈಗಾಗಲೇ ಸ್ಪಷ್ಟಪಡಿಸಿದ್ದರೂ ಯೆಚೂರಿ ಮತ್ತೆ ಆಯೋಗಕ್ಕೆ ಪತ್ರ ಬರೆದಿದ್ದಾರೆ. 

‘ಅಧಿಕೃತ ವಾಹಿನಿಯನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆಯೇ ಎಂಬುದರ ಬಗ್ಗೆ ಮಾತ್ರ ಆಯೋಗ ವಿಚಾರಣೆ ನಡೆಸಿದೆ. ಆದರೆ ವಿಶಾಲ ದೃಷ್ಟಿಕೋನದಿಂದ ಈ ವಿದ್ಯಮಾನವನ್ನು ಪರಿಶೀಲಿಸಬೇಕು’ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. 

‘ಲೋಕಸಭಾ ಚುನಾವಣೆಯ ಅಭ್ಯರ್ಥಿಯೂ ಆಗಿರುವ ನರೇಂದ್ರ ಮೋದಿ, ವಿಜ್ಞಾನಿಗಳ ಸಾಧನೆಯನ್ನು ಹೇಳಿಕೊಳ್ಳಲು ಪ್ರಧಾನಿ ಕಚೇರಿಯನ್ನು ಬಳಸಿಕೊಂಡಿದ್ದಾರೆ. ಚುನಾವಣೆಯ ವೇಳೆ ಇಂತಹ ಘೋಷಣೆ ಮಾಡುವ ಮೂಲಕ ನಿಯಮಗಳನ್ನು ಉಲ್ಲಂಘಿಸಿದ್ದಾರೆ’ ಎಂದು ಯೆಚೂರಿ ಹೇಳಿದ್ದಾರೆ. 

ಮೋದಿ ಅವರ ಭಾಷಣದ ಬಳಿಕ ಯಚೂರಿ ಅವರು ಆಯೋಗಕ್ಕೆ ಪತ್ರ ಬರೆದಿದ್ದರು. ಪ್ರಧಾನಿ ಅವರು ನೀತಿಸಂಹಿತೆ ಉಲ್ಲಂಘಿಸಿಲ್ಲ ಎಂದು ಆಯೋಗ ಅದಕ್ಕೆ ಉತ್ತರ ನೀಡಿತ್ತು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !