ಬೆಂಗಳೂರು: ‘ದತ್ತ ಮೇಷ್ಟ್ರು’ ಎಂದೇ ಪರಿಚಿತರಾಗಿರುವ ಜೆಡಿಎಸ್‌ನ ಹಿರಿಯ ನಾಯಕ ವೈ.ಎಸ್.ವಿ.ದತ್ತ ಅವರು ಮಂಗಳವಾರದಿಂದ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗಾಗಿ ಗಣಿತ ಪಾಠ ಆರಂಭಿಸಿದ್ದಾರೆ.

ಮಂಗಳವಾರ ಸಂಜೆ 7ರಿಂದ 8.30ರವರೆಗೆ ನಡೆದ ಈ ಪಾಠವನ್ನು 4 ಲಕ್ಷ ಜನ ನೋಡಿದ್ದರೆ, 17 ಸಾವಿರ ಜನ ಹಂಚಿಕೊಂಡಿದ್ದರು. ಬುಧವಾರದ ಸಂಜೆ 7.30ಕ್ಕೆ ಫೇಸ್‌ಬುಕ್‌ನಲ್ಲಿ ಮೇಷ್ಟ್ರುಪಾಠ ಮಾಡಿದರು.

ಗಣಿತ ಮತ್ತು ಭೌತವಿಜ್ಞಾನ ಪಾಠ ಮಾಡಲಿರುವ ಅವರು, ಪರೀಕ್ಷೆ ದಿನಾಂಕದ ಸಮೀಪದವರೆಗೂ ಇದನ್ನು ಮುಂದುವರಿಸಲು ಇಚ್ಛಿಸಿದ್ದಾರೆ.

40 ಸಾವಿರ ವಿದ್ಯಾರ್ಥಿಗಳು: 1969ರಲ್ಲಿ ನಗರದ ಬಸವನಗುಡಿ ನ್ಯಾಷನಲ್ ಕಾಲೇಜಿನಲ್ಲಿ ಪಿಯು ಓದಲು ಸೇರಿದ್ದ ದತ್ತ ಅವರು ಜೀವನೋಪಾಯಕ್ಕಾಗಿ ಕೋಚಿಂಗ್ ತರಗತಿ ಆರಂಭಿಸಿದ್ದರು. ಗಣಿತ ಮತ್ತು ಭೌತವಿಜ್ಞಾನದ ಮೇಲಿನ ಅವರ ಪ್ರೀತಿಯ ವಿಷಯಗಳು. ವಿಜ್ಞಾನದಲ್ಲಿ ಪದವಿ ಗಳಿಸಿದ ಬಳಿಕ ಅವರು ಕೋಚಿಂಗ್ ಮೇಸ್ಟ್ರು ಎಂದೇ ಖ್ಯಾತರಾದರು. ರಾಜಾಜಿನಗರದಲ್ಲಿ ಸುಮಾರು 25 ವರ್ಷ ಟ್ಯುಟೋರಿಯಲ್ ನಡೆಸಿದ ಅವರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಚಿವ ಗೋಪಾಲಯ್ಯ ಅವರಂತಹ 40 ಸಾವಿರಕ್ಕೂ ಅಧಿಕ ಶಿಷ್ಯರಿದ್ದಾರೆ.

1995ರಲ್ಲಿ ಸಕ್ರಿಯ ರಾಜಕಾರಣಕ್ಕೆ ಇಳಿದ ಕಾರಣ ಟ್ಯುಟೋರಿಯಲ್ ಬಂದ್ ಮಾಡಿದ್ದರು. 2005ರಲ್ಲಿ ವಿಧಾನ ಪರಿಷತ್ ಸದಸ್ಯರಾದ ಬಳಿಕ ತಮ್ಮ ಕಡೂರಿನಲ್ಲಿ ಕೋಚಿಂಗ್ ತರಗತಿ ಮುಂದುವರಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.