ಭಾನುವಾರ, ಮೇ 16, 2021
23 °C

ಬೆಳಗಾವಿ: 600 ಚೀಲ ‘ಅನ್ನಭಾಗ್ಯ’ ಅಕ್ಕಿ ವಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಇಲ್ಲಿನ ಜಟ್‌ಪಟ್‌ ಕಾಲೊನಿಯ ಗೋದಾಮಿನ ಮೇಲೆ ಸೋಮವಾರ ದಾಳಿ ನಡೆಸಿದ ಸಿಸಿಬಿ ಪೊಲೀಸರು, ಅಕ್ರಮವಾಗಿ ದಾಸ್ತಾನು ಮಾಡಿದ್ದ 600 ಮೂಟೆ ‘ಅನ್ನಭಾಗ್ಯ’ ಪಡಿತರ ಯೋಜನೆಯ ಅಕ್ಕಿಯನ್ನು ವಶಪಡಿಸಿಕೊಂಡು, ಇಬ್ಬರನ್ನು ಬಂಧಿಸಿದ್ದಾರೆ.

ಅದೇ ಕಾಲೊನಿಯ ಶೇಖರ ಕಬಟೆ ಹಾಗೂ ಕೊಲ್ಲಾಪುರದ ಟ್ರಕ್ ಚಾಲಕ ಕಂ ಮಾಲೀಕ ಕಿರಣ ದಿಲೀಪ ಪಾಟೀಲ ಬಂಧಿತರು. ಅವರಿಂದ ಲಾರಿಯನ್ನೂ ವಶಕ್ಕೆ ಪಡೆಯಲಾಗಿದೆ. ಸಿಸಿಬಿ ಇನ್‌ಸ್ಪೆಕ್ಟರ್‌ ಗುರುರಾಜ ಕಲ್ಯಾಣಶೆಟ್ಟಿ ಮತ್ತು ತಂಡದವರು ಕಾರ್ಯಾಚರಣೆ ನಡೆಸಿದ್ದಾರೆ ಎಂದು ಪೊಲೀಸ್ ಆಯುಕ್ತ ಲೋಕೇಶ್‌ಕುಮಾರ್‌ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು