ಸೋಮವಾರ, ಮೇ 25, 2020
27 °C

ಕಿರ್ಗಿಸ್ತಾನ: 8 ಜನರ ವಿರುದ್ಧ ಎಫ್‌ಐಆರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್‌: ಪ್ರವಾಸಿ ವೀಸಾ ಪಡೆದು ಇಸ್ಲಾಂ ಧರ್ಮದ ಪ್ರಚಾರ ಕೈಗೊಂಡ ಆರೋಪದ ಮೇರೆಗೆ ಕಿರ್ಗಿಸ್ತಾನದ ಎಂಟು ಪ್ರಜೆಗಳ ವಿರುದ್ಧ ಇಲ್ಲಿಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎಲ್ಲ ಎಂಟು ಜನರ ಪಾಸ್‌ಪೋರ್ಟ್‌ ಹಾಗೂ ಮೊಬೈಲ್‌ ಫೋನ್‌ಗಳನ್ನು ವಶಕ್ಕೆ ತೆಗೆದುಕೊಂಡಿರುವ ಪೊಲೀಸರು, ಇವರೊಂದಿಗೆ ಎಷ್ಟು ಜನ ಜಿಲ್ಲೆಗೆ ಬಂದಿದ್ದಾರೆ ಎಂಬ ಮಾಹಿತಿ ಕಲೆ ಹಾಕುತ್ತಿದ್ದಾರೆ. 

‘ವೀಸಾ ನಿಯಮ ಉಲ್ಲಂಘನೆಗಾಗಿ ಇವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪ್ರಸ್ತುತ ಇವರೆಲ್ಲ ನಗರದ ರಟಕಲ್‌ಪುರಾ ಮರ್ಕಜ್‌ ಮಸೀದಿಯಲ್ಲಿ (ಹೋಮ್‌ ಕ್ವಾರಂಟೈನ್) ಇದ್ದು, ಅವರ ಮೇಲೆ ನಿಗಾ ಇಟ್ಟಿದ್ದೇವೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ.ಎಲ್‌.ನಾಗೇಶ ತಿಳಿಸಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.